ಉಚಿತ ನೋಟ್ಸ್ ಪುಸ್ತಕ ಲೇಖನ ಸಾಮಗ್ರಿ ವಿತರಣೆ

ಹೆಮ್ಮಾಡಿ: ಮಕ್ಕಳಲ್ಲಿ ಶಿಕ್ಷಣದ ಹಸಿವನ್ನು ಬೆಳೆಸುವ ಶಿಕ್ಷಣ ಇಂದು ನಮಗೆ ಬೇಕಾಗಿದೆ. ಸಾಮಾಜಿಕವಾಗಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುವ ಮನೋಭಾವ ಅಗತ್ಯ. ದಾನಿಗಳ ಉದಾರಮನಸ್ಸಿನ ಸಹಾಯ ಸಹಕಾರದಿಂದ ಶಾಲೆಗಳ ಸೌಕರ್ಯಗಳು ವೃದ್ಧಿಸುವುದಲ್ಲದೇ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಲು ಸಾಧ್ಯ ಎಂದು ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅವರು ಹೇಳಿದರು.
    ಇಡೂರು-ಕುಂಜ್ಞಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿ, ಉದ್ಯಮಿ ಶಿವರಾಮ ಶೆಟ್ಟಿ ಹೊಸೂರು ಅವರು ಉಚಿತವಾಗಿ ಕೊಡಮಾಡಿದ ನೋಟ್ಸ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
    ಮುಖ್ಯ ಅತಿಥಿ ಎಸ್‍ಡಿಎಂಸಿ ಅಧ್ಯಕ್ಷ ಸಂತೋಷ್‍ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಗೋವರ್ಧನ ಶೆಟ್ಟಿ, ಯಮುನಾ ಶೆಟ್ಟಿ, ಸುಶೀಲ, ಸಿಆರ್‍ಪಿ ರತ್ನಾಕರ ಶೆಟ್ಟಿ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ಶಾಲಾ ಹಳೆವಿದ್ಯಾರ್ಥಿ ಸರ್ವೋತ್ತಮ ಶೆಟ್ಟಿ, ದಾನಿಗಳಾದ ಆನಂದ ಪೂಜಾರಿ, ಕೃಷ್ಣಯ್ಯ ಶೆಟ್ಟಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಶೆಟ್ಟಿ, ಸದಸ್ಯರಾದ ಜ್ಯೋತಿ ನಾಯ್ಕ, ಸರಸ್ವತಿ, ದೇವಕಿ ಶೆಟ್ಟಿ, ಬೇಬಿ ಪೂಜಾರಿ, ನಾಗರತ್ನ ಶೆಟ್ಟಿ, ಸರೋಜ, ಸಹಶಿಕ್ಷಕಕಿ ಉಷಾ ಎಸ್., ಗೌರವಶಿಕ್ಷಕಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು.
    ಮುಖ್ಯಶಿಕ್ಷಕ ಚಂದ್ರ ಡಿ. ಅವರು ಸ್ವಾಗತಿಸಿದರು. ಸಹಶಿಕ್ಷಕಿ ಆಶಾಕಿರಣ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಗೀತಾ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com