ಕೃಷಿ ಮತ್ತು ಪರಿಸರ ಜಾಗೃತಿ ಕಾರ್ಯಾಗಾರ

ಬೈಂದೂರು: ‘ಹಸಿರು ಬೆಳೆಸಿ ಪರಿಸರ ಉಳಿಸಿ, ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸುವ ನಿರ್ಧಾರ ಮಾಡಬೇಕಿದೆ. ಕೃಷಿ ಚಟುವಟಿಕೆಯನ್ನು ಉತ್ತೇಜನ ನೀಡುವ ಕೆಲಸ ಆಗಬೇಕು, ಕೃಷಿ ವಿನಾಶದತ್ತ ಹೋಗುವುದನ್ನು ತಡೆಯುವಲ್ಲಿ ನಾವೆಲ್ಲ ಪ್ರಾಮಾಣಿಕ ಪ್ರಯತ್ನ ನಡೆಸಬೇಕು’ ಎಂದು ರೋಟರಿ ಕ್ಲಬ್ ಬೈಂದೂರಿನ ಮಾಜಿ ಅಧ್ಯಕ್ಷ ಎ.ಶ್ರೀನಿವಾಸ ಅವರು ನುಡಿದರು.
      ಬೈಂದೂರು ಜೆ.ಎನ್.ಆರ್.ಕಲಾಮಂದಿರದ ಆವರಣದಲ್ಲಿ ನಾಗರಿಕ ವೇದಿಕೆ ಆಶ್ರಯದಲ್ಲಿ ನಡೆದ ಕೃಷಿ ಮತ್ತು ಪರಿಸರ ಜಾಗೃತಿ ಕಾರ್ಯಾಗಾರವನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವೇದಿಕೆಯ ಅಧ್ಯಕ್ಷರಾದ ಭಾಸ್ಕರ ಶೆಟ್ಟಿ ಬಿಯಾರ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಬೈಂದೂರು ಕ.ಸಾ.ಪ ಅಧ್ಯಕ್ಷರಾದ ಡಾ.ಸುಬ್ರಹ್ಮಣ್ಯ ಭಟ್, ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀನಿವಾಸ ಮದ್ದೋಡಿ, ರೋಟರಿ ಕಾರ್ಯದರ್ಶಿ ಎಂ.ಎನ್.ಶೇರುಗಾರ್, ಜಗದೀಶ ಪಟವಾಲ್, ಉದಯ ಶೆಟ್ಟಿ ನಾಕಟ್ಟೆ, ನಿವೃತ್ತ ಫಾರೆಸ್ಟರ್ ಸೀತಾರಾಮ್, ಚಂದ್ರಶೇಖರ ನಾವಡ, ರಾಮ ದೇವಾಡಿಗ, ಕೃಷ್ಣ ಪೂಜಾರಿ, ಶೇಷಯ್ಯ, ಪ್ರಭಾಕರ ಜಿ, ಗೋವಿಂದರಾಯ ಎಸ್., ವಿಶ್ವೇಶ್ವರಯ್ಯ ಎನ್. ಮುಂತಾದವರು ಉಪಸ್ಥಿತರಿದ್ದರು.
      ನಾಗರಿಕ ವೇದಿಕೆಯ ಗೌರವ ಸಲಹೆಗಾರ ಬಂಗ್ಲೆ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು, ಮಂಜುನಾಥ ಎ ಸ್ವಾಗತಿಸಿದರು, ಉದ್ಯಮಿ ಜಗನ್ನಾಥ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com