ಗಂಗೊಳ್ಳಿ ಮಲ್ಯರಮಠದಲ್ಲಿ ಜ್ಞಾನಗಂಗಾ ಕಾರ್ಯಕ್ರಮ

ಗಂಗೊಳ್ಳಿ: ಇಲ್ಲಿನ ನಿನಾದ ಸಂಸ್ಥೆಯ ವತಿಯಿಂದ ಜಿಎಸ್‌ಬಿ ಸಮಾಜದ ವಿಶೇಷವಾಗಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ನಡೆಯುತ್ತಿರುವ ಜ್ಞಾನಗಂಗಾ ಕಾರ್ಯಕ್ರಮ ಇತ್ತೀಚಿಗೆ ಮಲ್ಯರಮಠ ಶ್ರೀ ವೆಂಕಟರಮಣ ದೇವಳದಲ್ಲಿ ಶ್ರೀ ಗೋಕರ್ಣ ಮಠಾಧೀಶ ಶ್ರೀಮದ್‌ ವಿದ್ಯಾಧಿಧಿರಾಜ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಿತು.
    ಮಕ್ಕಳಿಗೆ ಆಶೀರ್ವಚನ ನೀಡಿ ಮಾತನಾಡಿದ ಶ್ರೀಮದ್‌ ವಿದ್ಯಾಧಿಧಿರಾಜ ತೀರ್ಥ ಸ್ವಾಮೀಜಿಯವರು ಸಮಾಜದಲ್ಲಿ ಧಾರ್ಮಿಕತೆಯ ಮಹತ್ವವನ್ನು ಅರಿತುಕೊಂಡು ಧಾರ್ಮಿಕ ಜಾಗತಿ ಮೂಡಿಸುವ ಕೆಲಸ ಕಾರ್ಯಗಳು ನಡೆಯಬೇಕು. ದಾಸ ಸಾಹಿತ್ಯದಲ್ಲಿ ಜೀವನದ ಎಲ್ಲಾ ಅಂಶಗಳು ಅಡಕವಾಗಿದೆ. ಜೀನವದ ಪ್ರತಿಯೊಂದು ಕ್ಷಣದಲ್ಲಿ ದೇವರನ್ನು ಸ್ಮರಿಸಿಕೊಂಡು ದೇವರ, ಗುರು ಹಿರಿಯರ ಸೇವೆಯನ್ನು ಮಾಡಬೇಕು ಎಂದರು.
      ಮೇಧಾ ಭಟ್‌ ಹಾರೊನಿಯಂ ಹಾಗೂ ನಾಗರಾಜ ನಾಯಕ್‌ ತಬಲಾದಲ್ಲಿ ಸಾಥ್‌ ನೀಡಿದರು. ಅಶ್ವಿ‌ನಿ ಭಟ್‌ ನರಸಿಂಹ ಸ್ತುತಿ ಪಠಿಸಿದರು. ಆದಿತ್ಯ ಶೆಣೆ„, ಅನುಷಾ ಶೆಣೆ„, ಬಿ.ಪ್ರಸನ್ನಾ ಪೈ, ವಿಜೇಂದ್ರ ನಾಯಕ್‌, ಪ್ರಜ್ವಲಾ ಪಡಿಯಾರ್‌ ಲಘು ವಾಯುಸ್ತುತಿ ಪಠಿಸಿದರು. ಸುಧೀಂದ್ರ ಭಟ್‌ ಮತ್ತು ಶ್ರೀನಾಥ ಭಟ್‌ ಗುರು ಸ್ತುತಿಯನ್ನು ಪಠಿಸಿದರು. ಮೇಧಾ ನಾಯಕ್‌ ಸುಭಾಷಿತ ಹೇಳಿದರು. ಜ್ಞಾನಗಂಗಾ ಕಾರ್ಯಕ್ರಮದ ಅಧ್ಯಕ್ಷ ಕೆ.ಕೃಷ್ಣ ಭಟ್‌, ಸಂಸ್ಥೆಯ ಕಾರ್ಯದರ್ಶಿ ಎನ್‌.ಗಜಾನನ ನಾಯಕ್‌, ಎಂ.ನಾಗೇಂದ್ರ ಪೈ, ಡಾ|ಕಾಶೀನಾಥ ಪೈ, ನಾರಾಯಣ ಶ್ಯಾನುಭಾಗ್‌, ರೋಹಿದಾಸ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.
    ನಿಶ್ಮಿತ್‌ ಕಿಣಿ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಮುಕುಂದ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೀಪಿಕಾ ಶ್ಯಾನುಭಾಗ್‌ ಕಾರ್ಯಕ್ರಮದ ವರದಿ ವಾಚಿಸಿದರು. ಸುಪ್ರಿಯಾ ಪಡಿಯಾರ್‌ ಪ್ರತಿಯೊಂದು ಕಾರ್ಯಕ್ರಮದಲ್ಲಿ ನಡೆಯುವ ವಿಷಯಗಳನ್ನು ತಿಳಿಸಿದರು. ಸ್ವಸ್ತಿಕ್‌ ಶೆಣೆ„ ಕಾರ್ಯಕ್ರಮ ನಿರೂಪಿಸಿದರು. ಅಚಲಾ ನಾಯಕ್‌ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com