ಖಾರ್ವಿ ಕೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನೂರರ ಸಂಭ್ರಮ

ಕುಂದಾಪುರ: ಇಲ್ಲಿನ ಪಂಚಗಂಗಾವಳಿ ನದಿಯ ತಟದಲ್ಲಿ 1912ರಲ್ಲಿಯೇ ಸ್ಥಾಪನೆಗೊಂಡ ಖಾರ್ವಿ ಕೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಗರ್ಲ್ಸ್‌ ಶಾಲೆ) ನೂರರ ಸಂಭ್ರಮದಲ್ಲಿದೆ. ನಗರದ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ವಿದ್ಯಾ ಸಂಪನ್ನರಾಗಿ ಮಾಡಿ ಬದುಕಿಗೆ ಭವ್ಯ ಬುನಾದಿ ಹಾಕಿ ಕೊಟ್ಟ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದ್ದು ಜೂ.8ರಂದು ಬೆಳಗ್ಗೆ 11ಕ್ಕೆ ನೂರರ ಸಂಭ್ರಮದ ಉದ್ಘಾಟನೆ ಹಾಗೂ ನೂತನ ಕಟ್ಟಡದ ಶಂಕುಸ್ಥಾಪನೆ ಜರಗಲಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ದಿನಕರ ಪಟೇಲ ಅವರು ಹೇಳಿದರು. ಅವರು ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
     ಶಂಕುಸ್ಥಾಪನೆಯನ್ನು ಉದ್ಯಮಿ ದಯಾನಂದ ಪೈ ಮತ್ತು ನೂರರ ಸಂಭ್ರಮದ ಉದ್ಘಾಟನೆಯನ್ನು ಮೋಹಿನಿ ದಯಾನಂದ ಪೈ ನೆರವೇರಿಸಲಿದ್ದಾರೆ.ಅವರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
      ಸಮಿತಿಯ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಮಾತನಾಡಿ, ನೂರರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ನೆರವಿನೊಂದಿಗೆ ಶಾಲೆ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಶಿಥಿಲವಾದ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ, ನೂತನ ಸಭಾಂಗಣ, ಇಂಗ್ಲಿಷ್‌ ಭಾಷೆಗೆ ಒತ್ತು ನೀಡುವ ಸಲುವಾಗಿ ನುರಿತ ಶಿಕ್ಷಕರ ನೇಮಕ, ವಿಶೇಷ ಇಂಗ್ಲಿಷ್‌ ಸ್ಪಿಕಿಂಗ್‌ ತರಬೇತಿ, ಪ್ರಯೋಗಶಾಲೆ, ವಾಚನಾಲಯ, ಅಡುಗೆ ಕೋಣೆೆ, ಅಂಗನವಾಡಿ ಕೋಣೆ, ಆವರಣ ಗೋಡೆ, ಆಟದ ಮೈದಾನ ನಿರ್ಮಾಣದ ಬಗ್ಗೆ ಚಿಂತನೆ ನಡೆದಿದೆ ಎಂದರು.  
      ಸುದ್ದಿಗೋಷ್ಟಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಡಿ.ಲಿಂಗಪ್ಪ, ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ರಮೇಶ್‌ ಎನ್‌.ಖಾರ್ವಿ , ಕ್ರೀಡಾ ಸಮಿತಿಯ ಪ್ರಕಾಶ್‌ ಆರ್‌.ಖಾರ್ವಿ, ದೈಹಿಕ ಶಿಕ್ಷಣ ಶಿಕ್ಷಕ ಆನಂದ ಪೂಜಾರಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com