ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ, ಜು.1ರಿಂದ ರೂ.1ನಂತೆ ಅಕ್ಕಿ: ಸಚಿವ ಸೊರಕೆ

ಕುಂದಾಪುರ: ಪಕ್ಷದ ಹಿರಿಯ ನಾಯಕರುಗಳ ಚುನಾವಣಾಪೂರ್ವ ಭರವಸೆಯಂತೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ರೈತರ, ಕಾರ್ಮಿಕರ ಬಾಕಿ ಪಾವತಿ ಕುರಿತು ಚಿಂತನೆ ನಡೆಸಿದ್ದು ಕಾರ್ಖಾನೆ ವ್ಯಾಪ್ತಿಯ ಜಾಗವನ್ನು ಉಳಿಸಿಕೊಂಡು ಈ ಪಾವತಿಯನ್ನು ಮಾಡಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಲ್ಲಿ ಕ್ರಮತೆಗೆದುಕೊಳ್ಳಲಾಗುದು ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.
   ಅವರು ಕುಂದಾಪುರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.
   ಚುನಾವಣಾ ಪೂರ್ವದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕೆ.ಪಿಸಿ ಅಧ್ಯಕ್ಷ ಡಾ|ಪರಮೆಶ್ವರ್‌ ಅವರು ಕಾಂಗ್ರೇಸ್‌ ಅಆಧಿಕಾರಕ್ಕೆ ಬಂದರೆ ಕಾರ್ಖಾನೆಗೆ 60 ಕೋಟಿ ನೀಡಿ ಪುನಶ್ಚೇತನಗೊಳಿಸವುದರೊಂದಿಗೆ ಕಾರ್ಮಿಕರ ಹಾಗೂ ರೈತರ ಬಾಕಿ ಪಾವತಿಯನ್ನು ಮಾಡುವ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಈಗಾಗಲೇ ಜಿಲ್ಲಾ ಧಿಕಾರಿಯವರನ್ನು ಭೇಟಿಯಾಗಿ ಬಾಕಿ ಪಾವತಿಯ ವಿವರವನ್ನು ಪಡೆಯಲಾಗಿದೆ ಎಂದರು.
   ಜು.1ರ ನಂತರ ಅಕ್ಕಿ ವಿತರಣೆಗೆ ಕ್ರಮ: ಬಡವರಿಗೆ ರೂ.1ರಂತೆ ಅಕ್ಕಿ ವಿತರಿಸುವ ಯೋಜನೆಯನ್ನು ಸರಕಾರ ಜು.1ರನಂತರ ಕಾರ್ಯರೂಪಕ್ಕೆ ತರಲಿದ್ದು, ಆಯಾ ಜಿಲ್ಲಾ ಕೇಂದ್ರದಲ್ಲಿ ಸಮಾವೇಶದ ಮೂಲಕ ಅಕ್ಕಿ ವಿತರಣೆಯ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com