ಕಡಲ್ಕೊರೆತ ಪ್ರದೇಶಕ್ಕೆ ಸಂಸದ ಜಯಪ್ರಕಾಶ್ ಹೆಗ್ಡೆ ಭೇಟಿ

ಕುಂದಾಪುರ: ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಕಂಡುಬಂದಿರುವ ಕಡಲ್ಕೊರೆತ ಪ್ರದೇಶಕ್ಕೆ ಭಾನುವಾರ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
     ಕಳೆದ ಕೆಲವು ದಿನಗಳಿಂದ ಕಡಲ್ಕೊರೆತದಿಂದಾಗಿ ಆರೋಗ್ಯ ಕೇಂದ್ರದ ಎದುರಿನ ರಸ್ತೆಯ ಭಾಗ ಸಂಪೂರ್ಣ ಕೊರೆತಕ್ಕೆ ಒಳಗಾಗಿದ್ದು, ಸಮೀಪದ ಮೀನುಗಾರರ ಶೆಡ್‌ಗಳು ಮತ್ತು ವಿದ್ಯುತ್ ಕಂಬಗಳು ಮತ್ತು ಶಾಲೆಯ ಕಟ್ಟಡಗಳು ಧರೆಗುರುಳುವ ಸನ್ನಾಹದಲ್ಲಿವೆ. ಪರಿಸ್ಥಿತಿಯ ಅವಲೋಕನ ನಡೆಸಿದ ಸಂಸದರು ಸ್ಥಳದಲ್ಲಿ ಬಂದರು ಇಲಾಖೆಯ ಅಕಾರಿಗಳಿಗೆ ಸಮಸ್ಯೆ ವಿವರಿಸಿ ತಕ್ಷಣಕ್ಕೆ 5 ಲಕ್ಷ ರೂ. ಮಂಜೂರು ಮಾಡಿ ಸಮಸ್ಯೆಗೆ ಸ್ಪಂದಿಸುವಂತೆ ಆದೇಶಿಸಿದರು. 
      ಬಂದರು ಇಲಾಖೆ ಸಹಾಯಕ ಎಂಜಿನಿಯರ್‌ಗಳಾದ ಟಿ.ಎಸ್. ರಾಥೋಡ್, ಡಯಾಸ್, ರಮೇಶ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಗಣೇಶ್ ಶೇರಿಗಾರ್, ಸಂದೇಶ್ ಪೂಜಾರಿ, ಜ್ಯೋತಿ, ಕುಮಾರ್ ಖಾರ್ವಿ, ಸುನೀಲ್ ಪೂಜಾರಿ, ಸಂದೀಪ್ ಪೂಜಾರಿ, ಕೋಡಿ ಶಂಕರ್ ಪೂಜಾರಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com