ವಿದ್ಯಾಸಂಸ್ಥೆಗೆ ನಾಗರಿಕರ ಸ್ವಂದನೆ ಅಗತ್ಯ: ಪ್ರೋ|| ಸಯೀದಾ ಬಾನು

ಬೈಂದೂರು: ಜೀವನದಲ್ಲಿ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಅಳವಡಿಸಿಕೊಂಡಾಗ ಯಶಸ್ಸು ಲಭಿಸುತ್ತದೆ. ಕಾಲೇಜು ಎಂಬುದು ಕೇವಲ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಅಲ್ಲಿನ ನಾಗರಿಕರ ಸ್ಪಂದನವೂ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೈಂದೂರಿನ ನಾಗರಿಕರ ಕಳಕಳಿ ಅಭಿನಂದನಾರ್ಹ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೋ. ಸಯೀದಾ ಬಾನು ಹೇಳಿದರು.
     ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಘಟಕ ಹಾಗೂ ನಾಗರಿಕ ವೇದಿಕೆ ಬೈಂದೂರು ಇವರು ಜಂಟಿಯಾಗಿ ಬಂಕೇಶ್ವರದ ಮಹಾಂಕಾಳಿ ಸಭಾಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.            ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ವೇದಿಕೆ ಅಧ್ಯಕ್ಷರಾದ ಭಾಸ್ಕರ ಶೆಟ್ಟಿ ಬಿಯಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಕಸಾಪ ಅಧ್ಯಕ್ಷರಾದ ಡಾ.ಸುಬ್ರಹ್ಮಣ್ಯ ಭಟ್, ಚಿತ್ರಾ ಬೈಂದೂರು ಭಾಗವಹಿಸಿದ್ದರು. ನಿವೃತ್ತ ಉಪನ್ಯಾಸಕರಾದ ಶೇಷಪ್ಪಯ್ಯ ಹೆಬ್ಬಾರ್ ಮತ್ತು ರೋಟರಿ ಕಾರ್ಯದರ್ಶಿ ಎಂ.ಎನ್.ಶೇರುಗಾರ್ ಅಭಿನಂದನಾ ಭಾಷಣ ಮಾಡಿದರು. ಮಂಜುನಾಥ ಎ. ಸ್ವಾಗತಿಸಿದರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಂಗ್ಲೆ ನಾಗರಾಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com