ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ

ಕುಂದಾಪುರ: ಸರಕಾರಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ವಂದಿಸದಿದ್ದಲ್ಲಿ ಪದವಿ ತರಗತಿಗಳನ್ನು ಬಹಿಷ್ಕರಿಸಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅತಿಥಿ ಉಪನ್ಯಾಸಕರ ಸಂಘವು ಎಚ್ಚರಿಕೆ ನೀಡಿದೆ.
      ನೂತನ ಸರಕಾರವು ಅಸ್ಥಿತ್ವಕ್ಕೆ ಬಂದ ನಂತರ ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ನಿಯೋಗವು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರನ್ನು ಭೇಟಿ ಮಾಡಿ ಉಪನ್ಯಾಸಕರ ನ್ಯಾಯಯುತವಾದ ಬೇಡಿಕೆಗಳಾದ ಸೇವಾಭದ್ರತೆ, ಒಮ್ಮೆ ನೇಮಕಗೊಂಡ ಅತಿಥಿ ಉಪನ್ಯಾಸಕರನ್ನು ವರ್ಷಂಪ್ರತಿ ನಡೆಸುವ ಸಂದರ್ಶನ ಕೈ ಬಿಡುವುದು, ತಿಂಗಳ ವೇತನ ಪಾವತಿ, ಹೊರ ರಾಜ್ಯದಲ್ಲಿರುವಂತೆ 25 ಸಾವಿರ ವೇತನ ನಿಗದಿ ಮಾಡುವುದು, ವರ್ಷಪೂರ್ತಿ ದುಡಿಸಿಕೊಂಡು ಕೇವಲ 9 ತಿಂಗಳ ವೇತನ ನೀಡುವ ಬದಲು 12 ತಿಂಗಳವರೆಗೆ ವಿಸ್ತರಿಸಿ ಸೇವೆಯನ್ನು ಅರ್ಹತೆಯ ಮೇರೆಗೆ ಖಾಯಂಗೊಳಿಸುವಂತೆ ಸಚಿವರ ಗಮನಕ್ಕೆ ತರಲಾಯಿತು.
       ನೂತನ ಸರ್ಕಾರವು ಅಧಿಕಾರವಹಿಸಿಕೊಂಡ ನಂತರ ಅತಿಥಿ ಉಪನ್ಯಾಸಕರ ಬಾಕಿ ಇರುವ ವೇತನ ಬಿಡುಗಡೆಯ ಬಗ್ಗೆ ಕ್ರಮ ಕೈಗೊಂಡಿದ್ದಾರೆ ಬಿಟ್ಟರೆ ಪ್ರಸಕ್ತ ಸಾಲಿನ ನ್ಯಾಯಯುತವಾದ ಬೇಡಿಕೆಯ ಬಗ್ಗೆ ಸ್ಪಂದಿಸದೇ ಇರುವುದರಿಂದ ಬೇಡಿಕೆ ಈಡೇರುವ ತನಕ ಹೋರಾಟದ ದಾರಿ ಹಿಡಿಯ ಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ವಕ್ವಾಡಿ ರಂಜಿತ್‌ ಕುಮಾರ್‌ ಹೇಳಿಕೆ ನೀಡಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com