ಮೂಡ್ಲಕಟ್ಟೆ ವಿದ್ಯಾರ್ಥಿಗಳಿಂದ ವಿನೂತನ ಆವಿಷ್ಕಾರ

ಕುಂದಾಪುರ: ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನೂತನ ಆವಿಷ್ಕಾರವನ್ನು ರೂಪಿಸಿದ್ದಾರೆ.
       ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ‌ ಅಂತಿಮ ಸೆಮಿಸ್ಟರ್‌ನ ಇಲೆಕ್ಟ್ರಿಕಲ್‌ ಆ್ಯಂಡ್‌ ಇಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳಾದ ಬಿಪಿನ್‌ ಬಿ. ಶೆಟ್ಟಿ, ಸಂದೀಪ್‌ ಆಚಾರ್ಯ, ಸಂದೇಶ್‌ ಹೆಗ್ಡೆ, ಪ್ರದೀಪ್‌ ಆರ್‌. ಅವರು ವಿಭಾಗದ ಉಪನ್ಯಾಸಕ ಕೆ.ಎಂ. ಭಟ್‌ರವರ ಮಾರ್ಗದರ್ಶನದಲ್ಲಿ ಸ್ಯಾವೆನಿಯಸ್‌ ವಿಂಡ್‌ಮಿಲ್‌ನ ಪರಿಷ್ಕೃತ ರೂಪದ ಪ್ರಾಜೆಕ್ಟ್ ನಿರ್ಮಿಸಿದ್ದಾರೆ.
   ಇದರಲ್ಲಿ ಸಜಾತೀಯ ಧ್ರುವದ ಅಯಂಸ್ಕಾಂತವನ್ನು ಟರ್ಬೆ„ನ್‌ ಬ್ಲೇಡ್‌ನ‌ ತಳಭಾಗಕ್ಕೆ ಅಳವಡಿಸಿದ್ದು, ಸ್ವಜಾತಿಯ ಕಾಂತೀಯ ಧ್ರುವಗಳ ವಿಕರ್ಷಣೆಯಿಂದಾಗಿ ಬ್ಲೇಡ್‌ನ‌ ವೇಗವು ಉತ್ಕರ್ಷ ಹೊಂದಿ ಕಡಿಮೆ ವೇಗದ ಗಾಳಿಯಲ್ಲೂ ಸಮರ್ಥವಾಗಿ ಚಲಿಸುವಲ್ಲಿ ಸಹಾಯಕವಾಗಿದೆ. ಇದು ಸ್ಯಾವೆನಿಯಸ್‌ ವಿಂಡ್‌ಮಿಲ್‌ನ ಸಾಮರ್ಥಯವನ್ನು ಅಭಿವಧಿìಸುವಲ್ಲಿ ಪೂರಕವಾಗಿದೆ.
     ಮತ್ತೂಂದು ಆವಿಷ್ಕಾರವನ್ನು ಅಂತಿಮ ಸೆಮಿಸ್ಟರ್‌ನ ಇಲೆಕ್ಟ್ರಿಕಲ್‌ ಆ್ಯಂಡ್‌ ಇಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳಾದ ಸಚಿನ್‌, ಶ್ರೀನಿಧಿ, ಕಾರ್ತಿಕ್‌ ಎಂ.ಸಿ., ಮಂಜುನಾಥ ಪ್ರಭು ಇವರು ವಿಭಾಗದ ಉಪನ್ಯಾಸಕ ಆಂಥೋನಿ ರಾಬರ್ಟ್‌ ಅವರ ಮಾರ್ಗದರ್ಶನದಲ್ಲಿ ಕಾಲ್ನಡಿಗೆಯಿಂದ ವಿದ್ಯುತ್‌ ಉತ್ಪಾದಿಸುವ ಉಪಕರಣವನ್ನು ಆವಿಷ್ಕರಿಸಿರುತ್ತಾರೆ.
      ಇದರಲ್ಲಿ ದಿನನಿತ್ಯದ ಜೀವನದಲ್ಲಿ ಜನರು ನಡೆದಾಡುವಾಗ ಹಲವಾರು ರೀತಿಯಲ್ಲಿ ವ್ಯರ್ಥವಾಗುವ ಶಕ್ತಿ0å‌ುನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ವಿದ್ಯುತ್ಛಕ್ತಿಯನ್ನು ಉತ್ಪಾದಿಸಿ, ಶೇಖರಿಸಿಟ್ಟು ದೆ„ನಂದಿನ ಬಳಕೆಗೆ ಉಪಯೋಗಿಸಬಹುದಾಗಿದೆ.
      ಈ ಉಪಕರಣವನ್ನು ಹೆಚ್ಚು ಜನಸಾಂದ್ರತೆ ಹಾಗೂ ಜನದಟ್ಟನೆ ಇರುವ ಸ್ಥಳಗಳಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಪುಟ್‌ಪಾತ್‌ಗಳು ಹಾಗೂ ಇತರೆ ಸ್ಥಳಗಳಲ್ಲಿ ಅಳವಡಿಸುವುದರಿಂದ ನಿರಂತರವಾಗಿ ವಿದ್ಯುತ್‌ನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಿ ಬಳಸಬಹುದಾಗಿದೆ.
      ಈ ಉಪಕರಣದ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, , ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಸತೀಶ್‌ ಶಂಕರ್‌ ಅಂಸಾಡಿ, ಕಾಲೇಜಿನ ಪ್ರಾಂಶುಪಾಲ ಡಾ| ಶುಭಾ ಪಿ. ಭಟ್‌, ಸಂಸ್ಥೆಯ ನಿರ್ದೇಶಕ ಡಾ| ಬಿ.ಆರ್‌. ಸಾಮಗ ಮತ್ತು ಆಡಳಿತ ನಿರ್ದೇಶಕ‌ ಸಿದ್ದಾರ್ಥ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭಕೋರಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com