ಬಂಟರ ಸಂಘ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನೀಡಲಾಗುವ 2013-14ನೇ ಶೆ„ಕ್ಷಣಿಕ ವರ್ಷದ ವಿದ್ಯಾರ್ಥಿ ವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
         ವಿದ್ಯಾರ್ಥಿಯು 2012-13ನೇ ಶೆ„ಕ್ಷಣಿಕ ವರ್ಷದಲ್ಲಿ ಎಸ್‌.ಎಸ್‌.ಎಲ್‌.ಸಿ ಅಥವಾ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ ಶೇ.80 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವುದರೊಂದಿಗೆ ಪ್ರಸ್ತುತ ಪ್ರಥಮ ವರ್ಷದ ಪದವಿ ಪೂರ್ವ, ಪದವಿ ತರಗತಿಯಲ್ಲಿ ಅಥವಾ ಯಾವುದೇ ವೃತ್ತಿಪರ ತರಬೇತಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಯು ಬಂಟ ಸಮುದಾಯವನ್ನು ಪ್ರತಿನಿಧಿಧಿಸುವ ಕುಂದಾಪುರ ತಾಲೂಕಿನ ನಿವಾಸಿಯಾಗಿದ್ದು , ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಪ್ರತಿನಿಧಿಧಿಯಾಗಿರತಬೇಕು.
       ಅರ್ಜಿಯೊಂದಿಗೆ ಎಸ್‌.ಎಸ್‌.ಎಲ್‌.ಸಿ/ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಅಂಕಪಟ್ಟಿಯ ನಕಲು ಪ್ರತಿ ಮತ್ತು ಬಿ. ಪಿ. ಎಲ್‌ ಪಡಿತರ ಚೀಟಿ ಅಥವಾ ಹನ್ನೊಂದು ಸಾವಿರ ರೂಪಾಯಿ ಆದಾಯ ಮಿತಿಗೆ ಒಳಪಟ್ಟ ಆದಾಯ ದೃಢೀಕರಣ ಪತ್ರದ ನಕಲು ಪ್ರತಿ ಲಗತ್ತಿಸಬೇಕು
      ಆಸಕ್ತ ಅರ್ಹ ವಿದ್ಯಾರ್ಥಿಗಳು ತಮ್ಮ ಕೈಬರಹದ ಮೂಲಕ ಸಿದ್ಧಪಡಿಸಿದ ಆರ್ಜಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಜು.20ರ ಒಳಗೆ ಅಧ್ಯಕ್ಷರು, ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.), ಬಂಟರ ಯಾನೆ ನಾಡವರ ಸಂಕೀರ್ಣ, ಆರ್‌. ಎನ್‌ ಶೆಟ್ಟಿ ಸಭಾಭವನ, ಮುಖ್ಯರಸ್ತೆ, ಕುಂದಾಪುರ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು (8762822427) ಮತ್ತು ಸುಕೇಶ್‌ ಶೆಟ್ಟಿ ಕೊಲ್ಲೂರು (9449902853) ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com