ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ: ಶ್ರೀ ಸಂಯಮೀಂದ್ರ ತೀರ್ಥರು

ಕೋಟೇಶ್ವರ: ಮಕ್ಕಳಿಗೆ ಧಾರ್ಮಿಕ ವಿಚಾರದಲ್ಲಿ ಬಾಲ್ಯದಿಂದಲೇ ಮಾರ್ಗದರ್ಶನ ನೀಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಮನೆಯಿಂದಲೇ ಆರಂಭಗೊಳ್ಳಬೇಕು ಎಂದು ಕಾಶೀ ಮಠಾಧೀಶ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ನುಡಿದರು.
     ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ರವಿವಾರ ಸಮಾಜ ಭಾಂದವರಿಗೆ ಆಶೀರ್ವಚನ ಮಾಡುತ್ತಾ ಅವರು ಮಾತನಾಡುತ್ತಿದ್ದರು.
      ದೇವರ ಭಕ್ತಿಯಲ್ಲಿ ಶ್ರದ್ಧೆ ಹಾಗೂ ವಿನಯತೆ ಇರಬೇಕು. ಸಮಾಜ ಬಾಂಧವರಲ್ಲಿ ಧಾರ್ಮಿಕತೆ ಉಳಿಸಿ, ಬೆಳೆಸಲೆಂದೇ ಕಾಶಿ ಮಠದ ಯತಿ ಪರಂಪರೆಯಲ್ಲಿ ಇತರ ವಿಷಯಗಳಿಗಿಂತ ಧಾರ್ಮಿಕ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು ಎಂದು ಅವರು ಹೇಳಿದರು.
     ಕೋಟೇಶ್ವರಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು ವಿಶೇಷ ಸಾಲಂಕೃತ ಪಲಕ್ಕಿಯಲ್ಲಿ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.
     ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ವಿ ಕಾಮತ್‌, ಆಟಕೆರೆ ಶಾಂತರಾಮ ಪೈ ಮತ್ತು ಮೊಕ್ತೇಸರರು, ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಕೆ. ಶಂಕರ್‌ ಕಾಮತ್‌, ಕೆ. ದಿನೇಶ ಕಾಮತ್‌ ಮತ್ತು ಸದಸ್ಯರು ಹಾಗೂ ಸಮಾಜ ಬಾಂಧವರು ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com