ದ್ರಾವಿಡ ಬ್ರಾಹ್ಮಣ ಪರಿಷತ್ತು ಅಧಿವೇಶನ

ಕೋಟೇಶ್ವರ: ಸಮಾಜದ ಉನ್ನತಿಗಾಗಿ ನಾವೆಲ್ಲರೂ ಒಗ್ಗಟಾಗಿ ಶ್ರಮಿಸಿದರೇ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಪ್ರಸನ್ನ ಕುಮಾರ ಐತಾಳ್‌ ಹೇಳಿದರು.
       ಅವರು ಕೋಟೇಶ್ವರ ಶ್ರೀ ವಾದಿರಾಜ ಕಲ್ಯಾಣ ಮಂಟಪದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಇದರ 19ನೇ ವಾರ್ಷಿಕ ಅಧಿವೇಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
       ಪರಿಷತ್ತ್ನ ಅಧ್ಯಕ್ಷ ಕೆ.ಶ್ರೀನಿವಾಸ ಹೆಬ್ಟಾರ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕೋಣಿ ಶಿವಾನಂದ ಕಾರಂತ, ನಿವೃತ್ತ ಪ್ರಧ್ಯಾಪಕ ಡಾ|ಸೋಮಶೇಖರ ಉಡುಪ, ಮಹಿಳಾ ವೇದಿಕೆಯ ಅಧ್ಯಕ್ಷೆ ಶಾಂತಾ ಗಣೇಶ್‌ ಉಪಸ್ಥಿತರಿದ್ದರು.
        ಇದೇ ಸಂದರ್ಭದಲ್ಲಿ ಹಿರಿಯ ವಿಪ್ರ ಸಾಧಕರಿಗೆ ಸಮ್ಮಾನಿಸಿ ಗೌರವಿಸಲಾಯಿತು. ನಾಗಪಾತ್ರಿ ಕಟೆರೆ ರಾಜಶೇಖರ ಹೊಳ್ಳ ವಿಪ್ರವಾಣಿಯ 17ನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
       ಪ್ರೊ|.ಶಂಕರರಾವ್‌ ಕಾಳಾವರ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ತ್ನ ಗೌರವಾಧ್ಯಕ್ಷ ಯು.ಲಕ್ಷ್ಮೀನಾರಾಯಣ ವೈದ್ಯ ಸ್ವಾಗತಿಸಿದರು. ಅಧ್ಯಕ್ಷ ಕೆ.ಶ್ರೀನಿವಾಸ ಹೆಬ್ಟಾರ್‌ ಪ್ರಸ್ತಾವಿಕ ಮಾತನಾಡಿದರು. ಸಂಸ್ಕೃತ ಅಧ್ಯಾಪಕ ವಿದ್ವಾನ್‌ ಯು.ಮಾಧವ ಅಡಿಗ ಶುಭಾ ಶಂಸನೆಗೆ„ದರು. ಪ್ರಧಾನ ಕಾರ್ಯದರ್ಶಿ ಬಿ.ಜಿ.ಸೀತಾರಾಮ ಧನ್ಯ ವಾರ್ಷಿಕ ವರದಿ ಮಂಡಿಸಿದರು.ಸತ್ಯನಾರಾಯಣ ಅರಸ್‌ ಆಯವ್ಯಯ ಪತ್ರ ಮಂಡಿಸಿದರು. ಹಳ್ಳಿ ಶ್ರೀನಿವಾಸ ಭಟ್ಟ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com