ಸಾರ್ಕ್: ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಗಣಪತಿ ಕಾಮತ್ ನೇಮಕ

ಕುಂದಾಪುರ: ಭಾರತ ಸೇರಿದಂತೆ 8 ರಾಷ್ಟ್ರಗಳು ಸದಸ್ಯರಾಗಿರುವ ಸಾರ್ಕ್ (ಎಸ್‌ಎ‌ಎ‌ಆರ್‌ಸಿ) ಸಂಘಟನೆಯ ಎಸ್.ಡಿ.ಎಫ್. ಸಚಿವಾಲಯದ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಉಡುಪಿ ಜಿಲ್ಲೆಯ ಚಾರ್ಟರ್ಡ್ ಅಕೌಂಟೆಂಟ್ ಮಿಯಾಲ್ ಗಣಪತಿ ಕಾಮತ್ ನೇಮಕಗೊಂಡಿದ್ದಾರೆ. ಜಿಲ್ಲೆಯ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಇಂತಹ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ. 
      ದಕ್ಷಿಣ ಏಷ್ಯಾದ 8 ರಾಷ್ಟ್ರಗಳ ಸಾರ್ಕ್ ಡೆವಲಪ್‌ಮೆಂಟ್ ಫಂಡ್‌ನ ಸೆಕ್ರೆಟರಿಯೆಟ್ ಭೂತಾನ್ ದೇಶದ ಥಿಂಫು ನಗರದಲ್ಲಿದ್ದು, ಆ.1ರಂದು ಮಿಯಾಲ್ ಗಣಪತಿ ಕಾಮತ್ ಅಲ್ಲಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಉಡುಪಿ ತಾಲೂಕಿನ ಸಂತೆಕಟ್ಟೆಯವರಾದ ಕಾಮತ್, ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಬಿಕಾಂನಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಯಾಗಿದ್ದು, ವೈಕುಂಠ ಬಾಳಿಗ ಕಾಲೇಜಿನಲ್ಲಿ ಕಾನೂನು ಪದವಿ, ಉಡುಪಿಯ ಪಿ.ಚಂದ್ರಮೋಹನ್ ಹಂದೆ ಎಂಡ್‌ಕಂರ ಬಳಿ ಆರ್ಟಿಕಲ್‌ಶಿಪ್ ಪೂರೈಸಿ, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಟೆಂಟ್ಸ್ ಆಫ್ ಇಂಡಿಯಾದ ಫೆಲೊ ಆಗಿದ್ದಾರೆ. ವಿದೇಶದ ಹಲವೆಡೆ -ನೈಜಿರಿಯಾ, ತಾಂಜಾನಿಯ, ಕಿನ್ಯಾ, ಉಗಾಂಡ, ಕುವೈತ್, ಕತಾರ್ ದೇಶಗಳಲ್ಲಿ- ಇವರು ಸೇವೆ ಸಲ್ಲಿಸಿದ್ದಾರೆ. ಈಗ ಕರ್ನಾಟಕದ ತುಮಕೂರಿನಲ್ಲಿ ಫಿನ್ನಿಶ್ ಎಂ.ಎನ್.ಸಿ. ಇನ್‌ಕ್ಯಾಪ್ ಕಾರ್ಪೊರೇಶನ್‌ನಲ್ಲಿ ಸೀನಿಯರ್ ಮ್ಯಾನೇಜರ್ ಫೈನಾನ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
       ಗಣಪತಿ ಕಾಮತ್ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ನಿವೃತ್ತ ಉಪನ್ಯಾಸಕ, ನಾವುಂದದ ರಿಚರ್ಡ್ ಆಲ್ಮೇಡಾ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲರೂ ಆಗಿರುವ ಮೋಹನದಾಸ ಪೈಯವರ ಅಳಿಯನಾಗಿ ಕುಂದಾಪುರದ ನಂಟು ಹೊಂದಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com