ಕೊಟ್ಟಿದ್ದು 38 ಬಿಟ್ಟಿದ್ದು 85 ಪಡೆದದ್ದು 123

ಕುಂದಾಪುರ: ಹತ್ತನೇ ತರಗತಿ ಮೌಲ್ಯಮಾಪನ ಬಳಿಕ ಓಎಂಆರ್ ಶೀಟ್ ತುಂಬುವಾಗ ಆದ ಅವಾಂತರದಿಂದ ಮಾತ್ರ ಭಾಷೆ ಕನ್ನಡದಲ್ಲಿ 85 ಅಂಕಗಳನ್ನು ಕೈಬಿಟ್ಟು ಕೇವಲ 38 ಅಂಕ ಪಡೆದ ವಿದ್ಯಾರ್ಥಿ ಆತಂಕಕ್ಕೊಳಗಾದ ಪ್ರಸಂಗ ನಡೆದಿದೆ.
ತಾಲೂಕಿನ   ಹೆಮ್ಮಾಡಿಯ ಜನತಾ  ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡಿದ ಪ್ರಸನ್ನ ಎಂಬ ವಿದ್ಯಾರ್ಥಿ ಮಾ.2013 ನೇ ವಾರ್ಷಿಕ ಪರೀಕ್ಷೆ ಕನ್ನಡ ವಿಷಯದಲ್ಲಿ 38 ಅಂಕಗಳು ಎಂದು ಪಲಿತಾಂಶದ ಸಂದರ್ಭದಲ್ಲಿ ಪ್ರಕಟವಾಗಿದ್ದನ್ನು ತಿಳಿದ ವಿದ್ಯಾರ್ಥಿ ದಿಗಿಲಾಗಿದ್ದಾನೆ. ಎಲ್ಲಾ ವಿಷಯದಲ್ಲೂ ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದ ಈತ ಕನ್ನಡದಲ್ಲಿ 38 ಅಂಕ ಬರಲು ಸಾದ್ಯವೇ ಇಲ್ಲ ಎಂಬ ಆತ್ಮ ವಿಶ್ವಾಸದಿಂದ ಅದ್ಯಾಪಕರ ಮೂಲಕ ಹೆತ್ತವರು ಪರೀಕ್ಷಾ ಮಂಡಳಿಗೆ ನಿಗದಿತ ಶುಲ್ಕ ಪಾವತಿಸಿ ಉತ್ತರ ಪತ್ರಿಕೆಯ ನಕಲನ್ನು ತರಿಸಿಕೊಳ್ಳಲಾಯಿತು. ಆದರೆ, ಅದರಲ್ಲಿ 125 ರಲ್ಲಿ 123 ಎಂಬುದಾಗಿ ಉಲ್ಲೇಖಿಸಲಾಗಿತ್ತು. ನಿರೀಕ್ಷಿಸಿದಷ್ಟೂ ಅಂಕ ಪಡೆದ ವಿದ್ಯಾರ್ಥಿ ನ್ಯಾಯ ಸಿಕ್ಕಿದ್ದಕ್ಕೆ ಎಲ್ಲಿಲ್ಲದ ಸಂತಸಗೊಂಡಿದ್ದಾನೆ.
ಉತ್ತರ ಪತ್ರಿಕೆಯ ಅಂಕಗಳನ್ನು ಓಎಂಆರ್ ಶೀಟ್ ತುಂಬಿಸುವಾಗ ಇಂತಹ ಬೇಜವಾಬ್ಬಾರಿತನದಿಂದ ವಿದ್ಯಾರ್ಥಿ ಭವಿಷ್ಯದೊಂದಿಗೆ ಚೆಲ್ಲಾಟ ಆಡುವ ಈ ಅವಾಂತರಕ್ಕೆ ಯಾರು ಹೊಣೆ?

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com