ರೈತರ ಪ್ರಥಮ ಹಂತದ ತರಬೇತಿ ಕಾರ್ಯಕ್ರಮ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ). ಕುಂದಾಪುರ ಮತ್ತು ನಬಾರ್ಡ್‌ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಂಡ್ಸೆ ವಲಯದ ಕರ್ಕುಂಜೆ ಕಾರ್ಯ ಕ್ಷೇತ್ರದಲ್ಲಿ 'ಶ್ರೀ' ರೈತರ ಪ್ರಥಮ ಹಂತದ ತರಬೇತಿ ಕಾರ್ಯಕ್ರಮ ಹಿಲ್ಕೋಡು ಗೋಪಾಲ ಮಂಜ ಅವರ ಮನೆಯಲ್ಲಿ ಜೂ.9ರಂದು ಜರಗಿತು.
    ಅಧ್ಯಕ್ಷತೆಯನ್ನು ಕರ್ಕುಂಜೆ 'ಶ್ರೀ' ಕೂಟದ ಅಧ್ಯಕ್ಷರಾದ ಮಹಾಬಲ ಪೂಜಾರಿ ಹಿಲ್ಕೋಡು ಉಪಸ್ಥಿತರಿದ್ದರು. ಮತ್ತು ಯೋಜನೆಯ ತಾಲೂಕು ಕೃಷಿ ಅಭಿವೃದ್ಧಿ ಅಧಿಕಾರಿ ವಿಷ್ಣು ಇವರು ಕಾರ್ಯಕ್ರಮದಲ್ಲಿ ಸದಸ್ಯರಿಗೆ ' ಸ್ಥಳೀಯ ಕೃಷಿಕರಿಗೆ ಮಾಹಿತಿ ನೀಡಿದರು.
    ಸಭೆಯಲ್ಲಿ ಸ್ಥಳಿಯ ಕೃಷಿಕರಾದ ಗಂಗಾಧರ ಮಂಜ, ಕರ್ಕುಂಜೆ 'ಏ' ಒಕ್ಕೂಟದ ಅಧ್ಯಕ್ಷ ಸಂತೋಷ ಕುಮಾರ ಉಪಸ್ಥಿತರಿದ್ದರು . ಕರ್ಕುಂಜೆ ಒಕ್ಕೂಟದ ಸದಸ್ಯರುಗಳು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com