ಕುಂದಾಪುರ: ರಾಜೀವಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಾಕಿ ಉಳಿದ ಎಲ್ಲಾ ಬಾಗಗಳಿಗೂ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಸಲಾಗುವುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರ ಪ್ರದೇಶಾಭಿವೃದ್ಧಿ ನಿಧಿಯ 3 ಲಕ್ಷ ರೂ ಅನುದಾನದಿಂದ ಬೆಳ್ಳಾಲ ಗ್ರಾಮದ ಮೋರ್ಟು ತುಂಬಿಬೇರು ವಿದ್ಯುತ್ ಸಂಪರ್ಕ ಯೋಜನೆಯನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.
ಕೆರಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಮೆಸ್ಕಾಂ ಸಹಾಯಕ ಕಾರ್ಯನಿರ್ವಹಾಕ ಅಭಿಯಂತರರಾದ ಶ್ರೀಸಿದ್ದೇಶ ಅವರು, ತಲ್ಲೂರು ಶಾಖಾಧಿಕಾರಿ ಭರತ್ರಾಜ್ ಶೆಟ್ಟಿ, ಸ್ಥಳೀಯ ಮುಖಂಡ ಸತೀಶ್ ಕುಮಾರ್ ಶೆಟ್ಟಿ, ವಿನೋದ್ ಕೆ.ಸುವರ್ಣ ಉಪಸ್ಥಿತರಿದ್ದರು.
ಸ್ಥಳೀಯ ಗ್ರಾ.ಪಂ. ಸದಸ್ಯ ರಮೇಶ್ ಪೂಜಾರಿ ಸ್ವಾಗತಿಸಿದರು. ಗ್ರಾ.ಪಂ. ಮಾಜಿ ಸದಸ್ಯ ಸಂಜೀವ ಪೂಜಾರಿ ವಂದಿಸಿದರು.
0 comments:
Post a Comment