2015ರ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

2015ರ ವಿಶ್ವಕಪ್ ಕ್ರಿಕೆಟಿನ ವೇಳಾಪಟ್ಟಿಯನ್ನ ಪ್ರಕಟಿಸಲಾಗಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ದೇಶಗಳು ಜಂಟಿಯಾಗಿ ಆಯೋಜಿಸಲಿರುವ ಈ ವರ್ಲ್ಡ್ ಕಪ್ ಟೂರ್ನಿಯು ಫೆಬ್ರವರಿ 14ರಂದು ಆರಂಭವಾಗಿ ಮಾರ್ಚ್ 29ರಂದು ಅಂತ್ಯಗೊಳ್ಳಲಿದೆ.
    ಬಿ ಗುಂಪಿನಲ್ಲಿ ಸೇರ್ಪಡೆಗೊಂಡಿರುವ ಎರಡು ಬಾರಿಯ ವಿಶ್ವಚಾಂಪಿಯನ್ಸ್ ಭಾರತ ತಂಡ ತನ್ನ ಮೊದಲ ಪಂದ್ಯವನ್ನ ಪಾಕ್ ವಿರುದ್ಧ ಆಡಲಿದೆ.
      ಟೂರ್ನಿಯು 14 ನಗರಗಳಲ್ಲಿ 44 ದಿನಗಳ ಕಾಲ 49 ಪಂದ್ಯಗಳು ನಡೆಯಲಿವೆ. 14 ತಂಡಗಳಿಗೆ ಅವಕಾಶವಿರುದ್ದು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತೀ ಗುಂಪಿನಲ್ಲಿ ಪ್ರತಿಯೊಂದು ತಂಡದ ಮೇಲೆ ಒಂದೊಂದೇ ಪಂದ್ಯವನ್ನ ಆಡಿಸಲಾಗುತ್ತದೆ. ಪ್ರತೀ ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಲಿವೆ.

ಎ ಗುಂಪು: ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಕ್ವಾಲಿಫಯರ್ 2 ಮತ್ತು ಕ್ವಾಲಿಫಯರ್ 3
ಬಿ ಗುಂಪು: ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಐರ್ಲೆಂಡ್ ಮತ್ತು ಕ್ವಾಲಿಫಯರ್ 4

      ಐರ್ಲೆಂಡ್ ತಂಡ ಮೊದಲ ಕ್ವಾಲಿಫಯರ್ ಆಗಿ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದುಕೊಂಡಿದೆ. ಉಳಿದ ಮೂರು ಕ್ವಾಲಿಫಯರ್.ಗಳು ನಿರ್ಧರಿತವಾಗಬೇಕಷ್ಟೇ. ಇದೇ ವರ್ಷದ ಅಕ್ಟೋಬರಿನಲ್ಲಿ ನಡೆಯಲಿರುವ ವರ್ಲ್ಡ್ ಕ್ರಿಕೆಟ್ ಲೀಗ್ ಚಾಂಪಿಯನ್ಶಿಪ್.ನಲ್ಲಿ ಗೆದ್ದ ತಂಡವೊಂದು ಎರಡನೇ ಕ್ವಾಲಿಫಯರ್ ಆಗಿ ವಿಶ್ವಕಪ್.ಗೆ ಅರ್ಹತೆ ಪಡೆಯಲಿದೆ.

2014ರಲ್ಲಿ ನಡೆಯಲಿರುವ ವರ್ಲ್ಡ್ ಕಪ್ ಕ್ವಾಲಿಫಯರ್ ಟೂರ್ನಿಯಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು 2015ರ ವಿಶ್ವಕಪ್.ಗೆ ಅರ್ಹತೆ ಗಿಟ್ಟಿಸಲಿವೆ.

ಭಾರತದ ಪಂದ್ಯಗಳು:

1) ಭಾರತ-ಪಾಕಿಸ್ತಾನ : 2015, ಫೆ.15 - ಸ್ಥಳ: ಅಡಿಲೇಡ್
2) ಭಾರತ-ದ.ಆಫ್ರಿಕಾ : 2015, ಫೆ.22 - ಸ್ಥಳ: ಮೆಲ್ಬೋರ್ನ್
3) ಭಾರತ-ಕ್ವಾಲಿಫಯರ್ 4 : 2015, ಫೆ.28 - ಸ್ಥಳ: ಪರ್ತ್
4) ಭಾರತ-ವೆಸ್ಟ್ ಇಂಡೀಸ್ : 2015, ಮಾ.6 - ಸ್ಥಳ: ಪರ್ತ್
5) ಭಾರತ-ಐರ್ಲೆಂಡ್ : 2015, ಮಾ.10 - ಸ್ಥಳ: ಹ್ಯಾಮಿಲ್ಟನ್
6) ಭಾರತ-ಜಿಂಬಾಬ್ವೆ : 2015, ಮಾ.14 - ಸ್ಥಳ: ಆಕ್ಲೆಂಡ್

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com