ಸೌದಿ ಅರೇಬಿಯಾದಲ್ಲಿರುವ 92,000 ಭಾರತೀಯರಿಗೆ ತುರ್ತು ನಿರ್ಗಮನ ಪತ್ರ

ಸುದ್ದಿ: ಸೌದಿ ಅರೇಬಿಯಾದ ಸರಕಾರವು ಜಾರಿಗೆ ತಂದ ನಿತಾಕತ್‌ ಕಾರ್ಮಿಕ ಕಾನೂನಿಂದಾಗಿ ಗಡೀಪಾರಿನ ಭೀತಿ ಎದುರಿಸುತ್ತಿದ್ದ 92,000 ಮಂದಿ ಭಾರತೀಯರಿಗೆ ಸೌದಿಯಲ್ಲಿನ ಭಾರತೀಯ ದೂತವಾಸವು ತುರ್ತು ನಿರ್ಗಮನ ಪತ್ರವನ್ನು ನೀಡಿದೆ.
       ವಂಚನೆ ನಡೆಸುವ ಕಾರ್ಮಿಕ ಗುತ್ತಿಗೆದಾರರ ಪತ್ತೆಗಾಗಿ ವೀಸಾ ಪದ್ಧತಿಯನ್ನು ವ್ಯವಸ್ಥಿತಗೊಳಿಸುವ ಸಂಬಂಧ ಭಾರತ ಸರಕಾರವು ಸೌದಿ ಸರಕಾರದೊಂದಿಗೆ ಮಾತುಕತೆಗಳನ್ನು ನಡೆಸಿರುವ ನಡುವೆಯೇ ಮೊದಲ ಹಂತದಲ್ಲಿ ಸುಮಾರು 92,000 ಭಾರತೀಯರಿಗೆ ತಾಯ್ನಾಡಿಗೆ ಮರಳಲು ಅನುಕೂಲವಾಗುವಂತೆ ತುರ್ತು ನಿರ್ಗಮನ ಪತ್ರಗಳನ್ನು ನೀಡಿದೆ ಎಂದು ಭಾರತೀಯ ರಾಯಭಾರಿ ಹಮೀದ್‌ ಆಲಿ ರಾವ್‌ ತಿಳಿಸಿದರು.
        ಮೇ 10ರಿಂದೀಚೆಗೆ 35 ಲಕ್ಷ ಅಕ್ರಮ ವಿದೇಶಿ ಉದ್ಯೋಗಿಗಳು ಸೌದಿ ಸರಕಾರದ ಕಾರ್ಮಿಕ ಖಾತೆಯೊಂದಿಗೆ ತಮ್ಮ ದಾಖಲಾತಿಗಳನ್ನು ಸರಿಪಡಿಸಿಕೊಂಡಿದ್ದು, ಇದರಲ್ಲಿ ಕನಿಷ್ಠ ಶೇ. 25ರಿಂದ 30ರಷ್ಟು ಮಂದಿ ಭಾರತೀಯ ಉದ್ಯೋಗಿಗಳಾಗಿದ್ದಾರೆ. ಸದ್ಯ ಸೌದಿಯಲ್ಲಿ 2.89 ದಶಲಕ್ಷ ಮಂದಿ ಭಾರತೀಯರು ನೆಲೆಸಿದ್ದು, ಪ್ರಸಕ್ತ ವರ್ಷದ ಮಾರ್ಚ್‌ನಿಂದ 10,000 ಮಂದಿ ಭಾರತೀಯರು ಸೌದಿಗೆ ಬಂದು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ ಎಂದವರು ತಿಳಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com