ರಾಜ್ಯದ ಆಯವ್ಯಯ ಮಂಡನೆಯ ಮುಖ್ಯಾಂಶಗಳು

ಸುದ್ದಿಲೋಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಎಂಟನೇ ಆಯವ್ಯಯ ಮಂಡಿಸುತ್ತಿದ್ದಾರೆ. ಈ ಹಿಂದೆ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದ ವೇಳೆ ಏಳು ಬಾರಿ ಯಶಸ್ವಿ ಬಜೆಟ್ ಮಂಡಿಸಿದ್ದರು.
ಇದೀಗ ಮುಖ್ಯಮಂತ್ರಿಯಾಗಿ ಮೊದಲ ಬಜೆಟ್ ಮಂಡಿಸುತ್ತಿರುವ ಇವರು ಒಟ್ಟಾರೆಯಾಗಿ ಇದೀಗ ಎಂಟನೇ ಬಜೆಟ್ ಮಂಡಿಸುತ್ತಿದ್ದಾರೆ.
ರಾಜ್ಯದ ಆಯವ್ಯಯ ಮಂಡನೆಯ ಮುಖ್ಯಾಂಶಗಳು ಇಂತಿವೆ...
 • ನೂತನ ಅವಿಷ್ಕಾರ ಯೋಜನೆಗಳಿಗೆ 15 ಕೋಟಿ ರೂ.
 • ಉತ್ಪಾದನಾ ವಲಯ ಉತ್ತೇಜನಕ್ಕೆ 5 ಕೋಟಿ
 • ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ಹೆಚ್ಚಳ
 • ಯಾದಗಿರಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ. ನೇಕಾರರ ಪ್ಯಾಕೇಜಿಗೆ 100 ಕೋಟಿ ರೂ. ಅನುಧಾನ
 • ಹತ್ತನೇ ತರಗತಿಯಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಏಳು ಸಾವಿರ ರೂಪಾಯಿ ಪ್ರೋತ್ಸಾಹ ಧನ.
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದ ಧಾರ್ಮಿಕ ಸಂಸ್ಥೆಗಳಿಗೆ ಐವತ್ತು ಕೋಟಿ ರೂಪಾಯಿ ಅನುಧಾನ.
 • 4 ವಸತಿ ನಿರ್ಮಾಣಕ್ಕೆ ನೀಡಲಾಗುತ್ತಿರುವ ಸಹಾಯಧನ ಹೆಚ್ಚಳ.
 • ಸಹಕಾರ ಸಂಘಗಳಿಂದ ರೈತರು ಪಡೆಯುವ ಸಾಲಕ್ಕೆ ಯಾವುದೇ ಪ್ರಮಾಣದ ಬಡ್ಡಿಯಿಲ್ಲ.
 • ಅಲೆಮಾರಿ ಜನಾಂಗಗಳ ಶ್ರೇಯೋಭಿವೃದ್ಧಿಗೆ ಐವತ್ತು ಕೋಟಿ ರೂಪಾಯಿ ಅನುದಾನ.
 • ಹೆಚ್’ಐವಿ, ಕುಷ್ಟ ರೋಗ ಪೀಡಿತ ಮಕ್ಕಳ ಶಿಕ್ಷಣ ವೆಚ್ಚ ಸಂಪೂರ್ಣ ಸರ್ಕಾರವೇ ಭರಿಸಲಿದೆ.
 • ಹೆಣ್ಣು ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕೆ ಪ್ರತೀದಿನ ಹಾಜರಾತಿ ಎರಡು ರೂಪಾಯಿ ಜಮಾ ಮಾಡಲಾಗುತ್ತದೆ.
 • ರೈತರಿಗೆ ಸೌರಶಕ್ತಿ ಆಧಾರಿತ ಪಂಪ್ ಸೆಟ್ ಪೂರೈಕೆ
 • ಡೀಸೆಲ್ ಮೇಲಿನ ಸ್ಥಳೀಯ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿರುವುದರಿಂದಾಗಿ ಪ್ರತೀ ಲೀಟರ್ ಡೀಸೆಲಿಗೆ 55 ಪೈಸೆ ಕಡಿತವಾಗಲಿದೆ.
 • ವಿಶ್ವಕರ್ಮ ಸಮುದಾಯದ ಅಭಿವೃದ್ದಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆಗಾಗಿ 5 ಕೋಟಿ ರೂ.ಅನುದಾನ.
 • ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯಗಳು ಆಯಾ ಸಮುದಾಯಕ್ಕೆ ಮೀಸಲಾದ ಸರ್ಕಾರಿ ಸೌಲಭ್ಯವನ್ನು ಪಡೆಯಲು ಅರ್ಹರಾಗಲು ಅಗತ್ಯವಾಗಿ ಬೇಕಾಗಿದ್ದ ಆದಾಯ ಪ್ರಮಾಣ ಮಿತಿಯನ್ನು ವಾರ್ಷಿಕ 4,40,000 ರೂ.ಗೆ ಹೆಚ್ಚಿಸಲಾಗಿದೆ.
 • ಅಲ್ಪಸಂಖ್ಯಾತ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ 850 ರಿಂದ 1000 ರೂ.ಗೆ ಹೆಚ್ಚಳ
 • ಅಲ್ಪಸಂಖ್ಯಾತ ವಿಧ್ಯಾರ್ಥಿಗಳ ಶಿಕ್ಷಣ ಉತ್ತೇಜನಕ್ಕೆ
 • ಒಟ್ಟಾರೆ ಅಲ್ಪಸಂಖ್ಯಾತರ ಅಭಿವೃದ್ದಿಗೆ 676 ಕೋಟಿ ರೂ ಅನುದಾನ
 • ಪ್ರತೀ ಜಿಲ್ಲೆಯಲ್ಲೂ ಮಹಿಳಾ ನರ್ಸಿಂಗ್ ಹಾಸ್ಟೆಲ್
 • ಎಸ್’ಸಿ/ಎಸ್’ಟಿ ಗಳಿಗೆ 45 ಹೊಸ ಹಾಸ್ಟೆಲ್
 • ಎಸ್’ಸಿ/ಎಸ್’ಟಿ ಕುಟುಂಬಗಳಿಗೆ 15,000 ರೂ.ವೆಚ್ಚದಲ್ಲಿ ಶೌಚಾಲಯ ನಿರ್ಮಾಣ
 • ಸಮಾಜ ಕಲ್ಯಾಣ ಇಲಾಖೆಗೆ ಈ ವರ್ಷ 3001 ಕೋಟಿ ಬಿಡುಗಡೆ
 • ಮೊಗವೀರ ಸಮುದಾಯ ನಿರ್ಮಾಣಕ್ಕೆ 2 ಕೋಟಿ
 • ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಟಾನ ನಿರ್ಮಾಣಕ್ಕೆ 5 ಕೋಟಿ
 • ಹಿಂದುಳಿದ ವರ್ಗಗಳ ಧಾರ್ಮಿಕ ಹಾಗೂ ಇತರ ಸಂಘ ಸಂಸ್ಥೆಗಳಿಗೆ 75 ಕೋಟಿ ರೂ ಅನುದಾನ
 • ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತ ಕರ್ನಾಟಕ ದರ್ಶನ ಪ್ರವಾಸ
 • ಧಾರವಾಡದಲ್ಲಿ ಐಐಐಟಿ ಸ್ಥಾಪನೆಗೆ 45 ಕೋಟಿ ರೂ


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com