ವಾಹನ ಚಾಲಕರ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

ಕುಂದಾಪುರ: ರಿಕ್ಷಾ ಚಾಲಕರು ಶಿಸ್ತಿನಿಂದ ಇದ್ದಲ್ಲಿ ಜೀವನದಲ್ಲಿ ಮುಂದೆ ಬರಲು ಸಾಧ್ಯ ಹಾಗೂ ಸಂಘಟನೆಯನ್ನು ಬಲಗೊಳಿಸಲು ಸಾಧ್ಯವೆಂದು ಸಿಐಟಿಯುವಿನ ರಾಜ್ಯ ಉಪಾಧ್ಯಕ್ಷ ಕೆ. ಶಂಕರ್‌  ಹೇಳಿದರು.
       ಅವರು ಕುಂದಾಪುರ ತಾ| ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಇವರ 37ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
      ಸಂಘದ ಅಧ್ಯಕ್ಷ ವಿ.ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಎಚ್‌. ಕರುಣಾಕರ, ಅತಿಥಿಗಳಾದ ಬಿ.ವಿ.ರಾಘವೇಂದ್ರ, ಎಚ್‌. ನರಿಸಿಂಹ ಉಪಸ್ಥಿತರಿದ್ದರು.
       ಸಂಘದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಬರೆಕಟ್ಟು , ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್‌ ವಿ., ಖಜಾಂಜಿಯಾಗಿ ಸಂತೋಷ ಕಲ್ಲಾಗಾರ, ಸಂಘಟನ ಕಾರ್ಯದರ್ಶಿಯಾಗಿ ರಾಜು ದೇವಾಡಿಗ, ಪತ್ರಿಕಾ ಸಲಹೆಗಾರರಾಗಿ ವೆಂಕಟೇಶ ಆಯ್ಕೆಯಾದರು. ಈ ಸಂದರ್ಭದಲ್ಲಿ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
       ಸಂತೋಷ ಕಲ್ಲಾಗರ ಸ್ವಾಗತಿಸಿದರು, ರಮೇಶ್‌ ವಿ. ವರದಿ ಮಂಡಿಸಿದರು, ಲೆಕ್ಕಪತ್ರವನ್ನು ದೀಪಾ ವೆಂಕಟೇಶ ಮಂಡಿಸಿದರು. ರಾಜು ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com