ನಿಲ್ಲದ ಕಡಲ್ಕೊರೆತ

ಕುಂದಾಪುರ: ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟ ತಪ್ಪಲಿನ ಕೆಲವಡೆ ಬಿರುಸಿನ ಮಳೆಯಾಗಿದ್ದರೆ ಹೆಚ್ಚಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಸಂಜೆ ವೇಳೆಗೆ ಮತ್ತೆ ಬಿರುಸುಗೊಂಡಿದೆ.
      ತಾಲೂಕಿನ ಸಬ್ಲಾಡಿ, ಕೊಲ್ಲೂರು, ಉಳೂ¤ರುಗಳಲ್ಲಿ ಉತ್ತಮ ಮಳೆಯಾಗಿದೆ. ಪಂಚ ನದಿಗಳು ಉಕ್ಕಿ ಹರಿಯುತ್ತಿದ್ದರೂ ಅಪಾಯದ ಮಟ್ಟ ತಲುಪಿಲ್ಲ.
        ತಾಲೂಕಿನ ಕರಾವಳಿ ಪ್ರದೇಶಗಳಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ತ್ರಾಸಿ - ಮರವಂತೆ, ದೊಂಬೆ, ಕುಂದಾಪುರ ಕೋಡಿ, ಕಿರಿಮಂಜೇಶ್ವರ, ಗಂಗೊಳ್ಳಿಯ ಮಡಿ, ಕಂಚುಗೋಡುಗಳಲ್ಲಿ ಅಪಾಯದ ಮುನ್ಸೂಚನೆ ನೀಡಿದೆ. ಮರವಂತೆಯ ತೆರೆದ ಮೀನುಗಾರಿಕಾ ಬಂದರು ನಿರ್ಮಾಣವಾಗುತ್ತಿರುವ ಪ್ರದೇಶದ ಬಳಿ ಸಮುದ್ರದ ಅಲೆಗಳು ದಡಕ್ಕೆ ಬಡಿಯುತ್ತಿದ್ದು, ಅಪಾಯದ ಅಂಚಿನಲ್ಲಿವೆ. ಕೋಡಿ ಹಾಗೂ ಹಳವಳ್ಳಿ ಪ್ರದೇಶದಲ್ಲಿ ಕಡಲ್ಕೊರೆತ ಮುಂದುವರಿದಿದೆ.
       ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಗೆ ಸೇರಿರುವ ಮಡಿಯಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಕಡಲ ತೀರದ ತೆಂಗಿನ ಮರಗಳು ಮರಗಳು ಸಮುದ್ರ ಪಾಲಾಗುತ್ತಿವೆ. ಮೀನುಗಾರರು ನಾಡದೋಣಿ ಮೀನುಗಾರಿಕೆಗೆ ತೆರಳಲು ಸಿದ್ಧಪಡಿಸಿ ದಡದಲ್ಲಿ ನಿಲ್ಲಿಸಿರುವ ದೋಣಿಗಳು ಕೂಡ ಅಪಾಯನ್ನು ಎದುರಿಸುತ್ತಿವೆ. ಕಡಲ್ಕೊರೆತ ಇದೇ ರೀತಿ ಮುಂದುವರಿದಲ್ಲಿ ವಾಸದ ಮನೆಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
        ಕಿರಿಮಂಜೇಶ್ವರ ಗ್ರಾಮದ ಶುಭದಾ ಶಾಲೆಯ ಬಳಿ ಹೊಸದಾಗಿ ಕೊರೆತ ಉಂಟಾಗಿದೆ. ಸುಮಾರು 150 ಮೀಟರ್‌ ಉದ್ದಕ್ಕೆ ಸಮುದ್ರ 35 ಮೀಟರ್‌ ಒಳ ನುಗ್ಗಿದೆ. ಅಲ್ಲಿ ತೀರದ ಉದ್ದಕ್ಕಿರುವ ಗಾಳಿ ಮರದ ಸಾಲನ್ನು ಸಮುದ್ರ ಕಬಳಿಸಿದೆ. ಕಿರಿಮಂಜೇಶ್ವರ ಆದ್ರುಗೋಳಿ ಬಳಿ ಮೂರು ಮನೆ‌ಗಳು ಅಪಾಯದ ಅಂಚಿನಲ್ಲಿವೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com