ದೇವರಾಡಿ ಶ್ರೀ ಬ್ರಹ್ಮಲಿಂಗೇಶ್ವರ, ಚಿಕ್ಕು ಪರಿವಾರ ದೇವಸ್ಥಾನ ನಿರ್ಮಾಣಕ್ಕೆ ಶಿಲನ್ಯಾಸ

ಕುಂದಾಪುರ: ದೇವಸ್ಥಾನವು ಜೀರ್ಣೋದ್ಧಾರಗೊಂಡು ಅಲ್ಲಿ ನಿತ್ಯ ಪೂಜೆ ಪುರಸ್ಕಾರ ಸಾಕಾರಗೊಂಡಾಗ ದೈವತ್ವದ ಕಳೆ ವಿಜ್ರಂಭಿಸಿ ಗ್ರಾಮದ ಸರ್ವತೋಮುಖ ಏಳಿಗೆ ಸಾದ್ಯ ಎಂದು ಪ್ರಥಮ ದರ್ಜೆ ಲೊಕೋಪಯೋಗಿ ಗುತ್ತಿಗೆದಾರ ಹಳ್ನಾಡು ಶೇಖರ ಶೆಟ್ಟಿ ಹೇಳಿದರು.
      ಅವರು ವಕ್ವಾಡಿ ದೇವರಾಡಿ ಬ್ರಹ್ಮಲಿಂಗೇಶ್ವರ, ಚಿಕ್ಕು ಸಪರಿವಾರ ದೇವಸ್ಥಾನ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ ಹೂವಿನಕೆರೆ ವಾದಿರಾಜ ಮಠದ ವೇದ ಮೂರ್ತಿ ವಾದಿರಾಜ್ ಭಟ್ ಆಶೀರ್ವಚನಗೈದರು. ಸೂರ್ಯ ಉದಯದಿಂದ ಅಸ್ತಮದವರೆಗೆ ಒಂದೇ ರೀತಿಯ ವಿಶೇಷ ಕಳೆ ಇರುವಂತೆ ಭಕ್ತರು ಅದೇ ರೀತಿಯಾಗಿ ಸಕ್ರೀಯರಾಗಿ ಪಾಲ್ಗೊಳ್ಳಬೇಕು. ಅರ್ಚಕರ ಪೂಜಾದಿ ಕೈಂಕರ್ಯಗಳಿಂದ ದೈವ ಕಳೆ ಪ್ರಕಾಶಮಾನವಾಗಿ ಊರಿನ ಸಮೃದ್ಧಿಯಾಗುತ್ತದೆ ಎಂದರು.
       ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜನ್ಸಾಲಿ ಶಿವರಾಮ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಪ್ರಭಾಕರ ಶೆಟ್ಟಿ ಸಭಾ ಕಾರ್ಯಕ್ರಮ ಉಧ್ಘಾಟಿದರು.
ಕಾಳಾವರ ಗ್ರಾಮ ಪಂ. ಅಧ್ಯಕ್ಷ ಸತೀಶ್ ಪೂಜಾರಿ, ಗ್ರಾಮ ಪಂ. ಸದಸ್ಯ ರವಿರಾಜ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ತಂತ್ರಾಡಿ ನಾಗಯ್ಯ ಶೆಟ್ಟಿ, ಮಂಜುಳ ಶ್ರೀನಿವಾಸ ಶೇಟ್, ನೈಲಾಡಿ ಭುಜಂಗ ಶೆಟ್ಟಿ, ಹೆಬ್ಬಾಗಿಲು ಮನೆ ಆನಂದ ಶೆಟ್ಟಿ, ಮೊಕ್ತೇಸರ ಭಾಲಕೃಷ್ಣ ಶೆಟ್ಟಿ, ಗಣಪತಿ ಶೆಟ್ಟಿ, ಅಶೋಕ್ ಶೆಟ್ಟಿ, ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾರಂಭಿಕ ಹಂತದಲ್ಲಿ ಜೀಣೋದ್ಧಾರಕ್ಕೆ ಧನಸಹಾಯ ನೀಡಿದ ಹಳ್ನಾಡು ಶೇಖರ ಶೆಟ್ಟಿ, ವೇದಮೂರ್ತಿ ವಾದಿರಾಜ್ ಭಟ್, ಜನ್ಸಾಲಿ ಶಿವರಾಮ್ ಶೆಟ್ಟಿ, ತಂತ್ರಾಡಿ ನಾಗಯ್ಯ ಶೆಟ್ಟಿ, ವಕ್ವಾಡಿ ನಾಗಯ್ಯ ಶೆಟ್ಟಿ ಹಾಗೂ ದೇವಸ್ಥಾನ ನಿರ್ಮಾಣದಲ್ಲಿ ತೊಡಗಿಸಿಕೊಂಡ ಮನೋಹರ್, ಆನಂದ ಆಚಾರ್ಯ, ಜಯರಾಮ ಶೆಟ್ಟಿಗಾರ್ ಹಾಗೂ ಶಿಲ್ಪಿ ಶಿವಾನಂದ ಅವರನ್ನು ಗೌರವಿಸಲಾಯಿತು. 
       ಉದಯ ಕುಮಾರ್ ಹೆಗ್ಡೆ ಪ್ರಾರ್ಥಿಸಿದರು. ಶಿಕ್ಷಕ ರಮೇಶ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಸುಧಾಕರ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷ ಆನಂದ ಶೆಟ್ಟಿ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com