ಸರಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರಧಾನ ಸಿವಿಲ್‌ ಜಡ್ಜ್ ನ್ಯಾಯಾಲಯಕ್ಕೆ ಅಪರ ಸರಕಾರಿ ವಕೀಲರ ಹುದ್ದೆಯನ್ನು ತುಂಬಲು ಆಸಕ್ತಿಯಿರುವ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.
      ಅರ್ಜಿ ನಮಾನೆಗಳು ಜಿಲ್ಲಾಧಿಕಾರಿ ಕಚೇರಿ ದಂಡನಾ ಶಾಖೆಯಲ್ಲಿ ಲಭ್ಯವಿದೆ. ಅವಧಿ ಮತ್ತು ಅನುಭವಗಳ ಬಗ್ಗೆ ಪುರಾವೆಗಳನ್ನು ಹಾಗೂ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) 1977ರ ನಿಯಮ 12ಎ ಯಿಂದ ಸಿ ಅಡಿಯಲ್ಲಿನ ಮಾಹಿತಿಗಳನ್ನು ಅಫಿದಾವತ್ತಿನೊಂದಿಗೆ ದೃಢೀಕರಿಸಿ ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ವಿಶೇಷ ಅರ್ಹತೆಗಳೇನಾದರೂ ಇದ್ದಲ್ಲಿ ಆ ಬಗ್ಗೆ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿಯನ್ನು ಜು. 27ರ ಒಳಗೆ ಜಿಲ್ಲಾಧಿಕಾರಿ ಕಚೇರಿಗೆ ತಂದು ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com