ಜೂ.19-20: ರಾಷ್ಟ್ರೀಯ ವಿಚಾರ ಸಂಕಿರಣ

ಕುಂದಾಪುರ:  ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ ಸಹಭಾಗಿತ್ವದೊಂದಿಗೆ ‘ಲಿಬರಲೈಸ್ಡ್ ಇಂಡಿಯ : ಪೊಲಿಟಿಕ್ಸ್,ಸೊಸೈಟಿ ಆಂಡ್ ಎಕೊನಮಿ (Liberalised India : Politics, Society and Economy)ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಜೂ. 19 ಮತ್ತು 20 ರಂದು ಆಯೋಜಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲೆ ಎಂ. ಚಂದ್ರಪ್ರಭಾ ಆರ್. ಹೆಗ್ಡೆ ತಿಳಿಸಿದ್ದಾರೆ.
     1990 ರ ದಶಕದಲ್ಲಿ ಅಳವಡಿಸಲಾದ ಆರ್ಥಿಕ ನೀತಿಯು ಭಾರತದ ಸಾಮಾಜಿಕ ರಾಜಕೀಯ ಜೀವನದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಿದೆ. ಇದು ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆ ಪ್ರಾಯೋಜಿತ ಜಾಗತೀಕರಣದ ಒಂದು ಭಾಗವಾಗಿದ್ದು, ಆರ್ಥಿಕತೆಯ ಉದಾರೀಕರಣ, ಖಾಸಗಿ ಮಾರುಕಟ್ಟೆ ಪ್ರಣೀತ ಆರ್ಥಿಕ ವ್ಯವಸ್ಥೆ, ರಾಷ್ಟ್ರಗಳ ನಡುವೆ ಸರಕು, ಸೇವೆ, ಬಂಡವಾಳ, ಮಾಹಿತಿ ಹಾಗೂ ತಂತ್ರಜ್ಞಾನದ ಮುಕ್ತ ಚಲನೆಯನ್ನು ಆಧರಿಸಿದೆ. ಈ ಬದಲಾದ ಆರ್ಥಿಕ ನೀತಿಯಿಂದಾಗಿ ಭಾರತದ ರಾಜಕೀಯ ರಂಗವೇ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ಈ ಉದಾರೀಕರಣ ನೀತಿ ಜಾರಿಯಾಗಿಎರಡು ದಶಕಗಳು ಸಂದ  ಈ ಸಂದರ್ಭದಲ್ಲಿ ಈ ಬಗ್ಗೆ ಮರುಚಿಂತನೆ, ವಿಮರ್ಷೆ ನಡೆಸುವ ಅಗತ್ಯ ಮನಗಂಡು ಈ ವಿಚಾರ ಸಂಕೀರಣವನ್ನು ಹಮ್ಮಿಕೊಳ್ಳಲಾಗಿದೆ. 
         ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಪ್ರೋ || ವೆಲೆರಿಯನ್ ರೋಡ್ರಿಗಸ್ ವಿಚರ ಸಂಕಿರಣವನ್ನು ಜು. 19 ರ ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಚಾರ ಸಂಕಿರಣದ ಸಂಯೋಜಕ, ಉಪನ್ಯಾಸಕ ಡಾ || ಎಂ. ದಿನೇಶ್ ಹೆಗ್ಡೆ ರಚಿಸಿ ದೆಹಲಿಯ ಜವಾಹರ್ ಲಾಲ್ ಪಬ್ಲಿಷರ್ಸ್ ಪ್ರಕಟಿಸಿದ ‘ಬ್ಯಾಕ್‍ವರ್ಡ್ ಕ್ಲಾಸ್ ಮೂವ್‍ಮೆಂಟ್ ಇನ್ ಇಂಡಿಯ’ (Backward class movement in India) ಎಂಬ ಗ್ರಂಥವನ್ನು ಪ್ರೋ || ರೋಡ್ರಿಗಸ್ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸುವರು. 
        ಎರಡು ದಿನಗಳ ಈ ವಿಚಾರ ಸಂಕಿರಣದಲ್ಲಿ ಖ್ಯಾತ ವಿದ್ವಾಂಸರುಗಳಾದ ಚೆನ್ನೈಯ ಪ್ರೋ || ಕೆ. ನಾಗರಾಜ್, ಮೈಸೂರು ವಿ.ವಿ.ಯ ಪ್ರೋ || ಮುಸಾಫರ್ ಅಸ್ಸಾದಿ, ಹಂಪಿಯ ಪ್ರೋ || ಟಿ.ಆರ್. ಚಂದ್ರಶೇಖರ್, ಬೆಂಗಳೂರಿನ ಐಸೆಕ್‍ನಿಂದ ಪ್ರೋ || ಮನೋಹರ್ ಯಾದವ್, ಮಂಗಳುರು ವಿ.ವಿ.ಯ ಪ್ರೋ || ರಾಜರಾಮ್ ತೋಳ್ಪಾಡಿ. ಪ್ರೋ || ಪಿ.ಎಲ್. ಧರ್ಮ, ಪ್ರೋ || ಉದಯ ಕುಮಾರ್, ಪತ್ರಕರ್ತ ಶಿವ ಸುಂದರ್m ಬೆಂಗಳೂರಿನ ಖಾಯಂ ಲೋಕ ಅದಾಲತ್ ಸದಸ್ಯ ಬಾಲಕೃಷ್ಣ ಶೆಟ್ಟಿ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿವಿಧ ವಿದ್ವಾಂಸರು 22 ಸಂಶೋಧನಾ ಲೇಖನಗಳನ್ನು ಮಂಡಿಸಲಿದ್ದಾರೆ. 
         ಜು. 20 ರ ಶನಿವಾರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳುರು ವಿ.ವಿ.ಯ ಮುಖ್ಯಸ್ಥ ಪ್ರೋ || ಜಯರಾಜ್ ಅಮೀನ್ ಸಮಾರೋಪ ಭಾಷಣ ಮಾಡಲಿದ್ದಾರೆ.
     ಈ ವಿಚಾರ ಸಂಕಿರಣಕ್ಕೆ ಆಸಕ್ತರಿಗೆ ಉಚಿತ ಪ್ರವೇಶವಿದ್ದು, ಪಾಲ್ಗೊಳ್ಳುವ ಪದವಿ ಕಾಲೇಜಿನ ಉಪನ್ಯಾಸಕರುಗಳಿಗೆ ಆಯುಕ್ತರಿಂದ ಅನ್ಯಕಾರ್ಯ ನಿಮಿತ್ತ ರಜೆ ಮಂಜೂರಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com