ಕೊಲ್ಲೂರು-ಕುಂದಾಪುರ-ಉಡುಪಿ ನಡುವೆ ಸರಕಾರಿ ಬಸ್

ಸಿದ್ದಾಪುರ: ರಾಜ್ಯ ರಸ್ತೆ ಸಾರಿಗೆ ನಿಗಮವು ಕೊಲ್ಲೂರು-ಕುಂದಾಪುರ ಹಾಗೂ ಕೊಲ್ಲೂರು-ಉಡುಪಿಗೆ ಸಿದ್ದಾ ಪುರ ಮಾರ್ಗವಾಗಿ ಸಾರಿಗೆ ಬಸ್ ಸೇವೆ ಆರಂಭಿಸಿತು.  ಬಸ್ ಸಿದ್ದಾಪುರಕ್ಕೆ ಆಗಮಿ ಸಿದಾಗ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ಸ್ವಾಗತಿಸಿದರು.
     ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಭಂಡಾರಿ ನೂತನ ಬಸ್ ಸೇವೆಗೆ ಸ್ವಾಗತ ನೀಡಿ ಮಾತನಾಡಿ, ಪ್ರಸ್ತುತ ವಿದ್ಯಮಾನದಲ್ಲಿ ಸರ್ಕಾರಿ ಬಸ್ ಸೇವೆ ಸಾರ್ವನಿಕರಿಗೆ ಅಗತ್ಯವಾಗಿ ಬೇಕಾಗಿದೆ. ಇದರಿಂದಾಗಿ ವಿದ್ಯಾರ್ಥಿ ಗಳಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲ ವಾಗಲಿದೆ. ಸರ್ಕಾರ ನೀಡಿರುವ ಕಡಿಮೆ ದರದ ಪ್ರಯಾಣ ಸೇವೆ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
    ಆಜ್ರಿ ಚೋನಮನೆ ಶನೇಶ್ವರ ದೇವಳದ ಧರ್ಮದರ್ಶಿ ಅಶೋಕ ಕುಮಾರ ಶೆಟ್ಟಿ, ಉಡುಪಿ ತಾಲೂಕು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದಿವಾಕರ ಹೆಗ್ಡೆ ಶಿರಿಯಾರ ಸಿದ್ದಾಪುರ ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರಾದ ವಾಸುದೇವ ಭಟ್, ಎಸ್.ಕೆ.ವಾಸುದೇವ ಪೈ, ಕೆ.ಭೋಜ ಶೆಟ್ಟಿ, ಸಾದಿಕ್ ಸಾಹೇಬ್ ಜನ್ಸಾಲೆ, ಅಬ್ದುಲ್ ಸಮದ್ ಜನ್ಸಾಲೆ, ಶೇಖರ ಶೆಟ್ಟಿ ಹೆನ್ನಾಬೈಲು, ಮಂಜುನಾಥ ಶೆಟ್ಟಿ ಬಾಳೆಬೇರು, ಮಂಜುನಾಥ ನಾಯ್ಕ ಕೊಡ್ಲಾಡಿ, ಮೂದೂರು ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರಾದ ವೇಣುಗೋಪಾಲ, ಅಥೋನಿ, ಬಸ್ರೂರು ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯ ಕೃಷ್ಣ ಕಳಂಜೆ, ಹಳ್ಳಿಹೊಳೆಯ ದತ್ತಮೂರ್ತಿ ಚಾತ್ರ, ನಾಗರಾಜ ನಾಯ್ಕ ಹಳ್ಳಿಹೊಳೆ, ಗಣೇಶ್ ಪೂಜಾರಿ ನಿರ್‌ಜಡ್ಡು, ಹಳ್ಳಿಹೊಳೆ ದಲಿತ ಸಂಘದ ಅಧ್ಯಕ್ಷ ಮಂಜು ಹರಿಜನ ಇತರರು ಉಪಸ್ಥಿತರಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com