ವಲಯ ಮಟ್ಟದ ನವಜೀವನ ಸಮಿತಿ ಉದ್ಘಾಟನೆ

ಚಿತ್ತೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ಚಿತ್ತೂರು ವಲಯದ ನವಜೀವನ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಚಿತ್ತೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಡಾ| ಅತುಲ್ ಕುಮಾರ್ ಶೆಟ್ಟಿ ನವಜೀವನ ಸಮಿತಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಚಂದ್ರ ಮಂಜರು, ವಲಯ ಮೇಲ್ವಿಚಾರಕ ಮಹೇಶ್ ಆರ್., ಉಪಸ್ಥಿತರಿದ್ದರು.
ನವಜೀವನ ಸಮಿತಿಯ ಅಧ್ಯಕ್ಷ ಶಂಕರ ಶೆಟ್ಟಿ, ಉಪಾಧ್ಯಕ್ಷ ಬಸವ ಇಡೂರು, ಕೋಶಾಧಿಕಾರಿ ನಾಗಯ್ಯ ಆಲೂರು, ಕಾರ್ಯದರ್ಶಿ ರಮೇಶ ಆಚಾರ್ ಬೆಳ್ಳಾಲ, ಜೊತೆ ಕಾರ್ಯದರ್ಶಿ ಕೃಷ್ಣ ಆಲೂರು ಈ ಸಂದರ್ಭದಲ್ಲಿ ಹಾಜರಿದ್ದರು. ಸೇವಾ ಪ್ರತಿನಿಧಿ ರೇವತಿ ಸ್ವಾಗತಿಸಿ, ರಮೇಶ ಆಚಾರ್ ವಂದಿಸಿದರು.(ವಿ. 12)


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com