ಭಂಡಾರ್ಕಾರ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ ಕಾರ್ಯಕ್ರಮ

ಕುಂದಾಪುರ: ಇಲ್ಲಿನ ಅಂಪಾರು ಗ್ರಾಮದ ಬಾಳೆಬೆಟ್ಟುವಿನಲ್ಲಿನ ಅರಣ್ಯ ಇಲಾಖೆಯ ದೈವವನದಲ್ಲಿ ವನಮಹೋತ್ಸವದ ಪ್ರಯುಕ್ತ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ  ಶ್ರಮದಾನ ಕಾರ್ಯಕ್ರಮ ನಡೆಯಿತು. 
 ಈ ಕಾರ್ಯಕ್ರಮದಲ್ಲಿ ವಲಯ ಸಂರಕ್ಷಾಣಾಧಿಕಾರಿ ಶ್ರೀ ರಮೇಶ್ ಅವರು ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದದಲ್ಲಿ ಅವರು ಅಪರೂಪದ ಸಸ್ಯ ಸಂಕುಲವನ್ನು ಸಂರಕ್ಷಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಬೇಕು ಎಂದರು. 
ದೈವವನದಲ್ಲಿ ವಿವಿಧ ಜಾತಿಗೆ ಸೇರಿದ ಸುಮಾರು 170 ಸಸ್ಯ ತಳಿಗಳನ್ನು ವಿದ್ಯಾರ್ಥಿಗಳು ನೆಟ್ಟರು. 
ಈ ಸಂದರ್ಭದಲ್ಲಿ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದ ಶ್ರೀ ಶಶಿಕಾಂತ್ ಹತ್ವಾರ್, ಉಪವಲಯ ಸಂರಕ್ಷಣಾಧಿಕಾರಿ ಶ್ರೀ ನರಸಿಂಗ್ ಆರ್.ಕಾಂಬಳೆ, ಅರಣ್ಯ ರಕ್ಷಕರಾದ ಶ್ರೀ ಗುರುರಾಜ್ ನಾಯಕ್ ಮತ್ತು ಶ್ರೀ ಶ್ರೀಕಾಂತ್ ಉಪಸ್ಥಿತರಿದ್ದು ಮಾಹಿತಿ ನೀಡಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com