ಬೈಂದೂರು ತಾಲ್ಲೂಕು ರಚನೆಗೆ ಸಿಎಂಗೆ ಪತ್ರ

ಬೈಂದೂರು: ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ಬೈಂದೂರು ತಾಲ್ಲೂಕಾಗಿ ರಚನೆ ಮಾಡಲು ಮುಂಗಡಪತ್ರದಲ್ಲಿ ಪ್ರಾಶಸ್ತ್ಯ ನೀಡದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮದಿಂದ ಬೈಂದೂರಿನ ಜನತೆಗೆ ಬೇಸರವಾಗಿದೆ ಎಂದು ಬೈಂದೂರು ನಾಗರಿಕ ವೇದಿಕೆಯ ಮಾಜಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್ ತಿಳಿಸಿದ್ದಾರೆ.
      ಜನತೆಯ ಬೇಡಿಕೆಯಾದ ಬೈಂದೂರನ್ನು ತಾಲ್ಲೂಕಾಗಿ ರಚನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರ ಪರವಾಗಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com