ವನಸ್ಪತಿಗಳು ಮಾನವ ಜೀವ‌ಕ್ಕೆ ಪೂರಕ: ಉಪ್ಪುಂದ ಚಂದ್ರಶೇಖರ ಹೊಳ್ಳ

ಕುಂದಾಪುರ: ಮಾನವ ಜೀವ ರಹಸ್ಯಕ್ಕೆ ಹೊಂದಾಣಿಕೆಯಾಗುವಂತೆ ವನಸ್ಪತಿಗಳು ರಚಿತವಾಗಿದೆ, ಇವುಗಳು ನಮ್ಮ ದೇಹದ ರೋಗ ನಿವಾಹರಕ ಮಾತ್ರವಾಗಿರದೆ ಮನಸ್ಸು, ಬುದ್ದಿಯನ್ನು ಪ್ರಚೋದಿಸುತ್ತವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.
      ಅವರು ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಹೊಳ್ಳರ ದತ್ತಿನಿಧಿ ಮತ್ತು ಗ್ರೀನ್‌ ಇಂಡಿಯಾ ಮೂವ್‌ ಮೆಂಟ್‌ ನ ಸಹಯೋಗದೊಂದಿಗೆ ನಡೆದ ಬಿಲ್ವ ವೃಕ್ಷ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     ಗ್ರೀನ್‌ ಇಂಡಿಯಾ ಮೂವ್‌ ಮೆಂಟ್‌ನ ಮುನಿಯಾಲು ಗಣೇಶ ಶೆಣೆ„ ಅವರು ಉಪ್ಪುಂದ, ಬಿಜೂರು, ಬೆ„ಂದೂರು, ಖಂಬದಕೋಣೆ, ಕೆರ್ಗಾಲು ಕಿರಿಮಂಜೇಶ್ವರ ಪರಿಸರದ ಸುಮಾರು ನೂರು ಜನರಿಗೆ ಬಿಲ್ವಪತ್ರ ಗಿಡಗಳನ್ನು ವಿತರಿಸಿ, ವೃಕ್ಷದ ಆಯುರ್ವೆದೀಯ ಗುಣಗಳನ್ನು ಕುರಿತು ಉಪನ್ಯಾಸ ನೀಡಿದರು.
      ಉಪ್ಪುಂದ ಜೀಸಿಐಅಧ್ಯಕ್ಷ ಮಂಗೇಶ್‌ ಶ್ಯಾನುಭಾಗ್‌, ಗ್ರಾ.ಪಂ. ಸದಸ್ಯ ಯು. ಸಂದೇಶ್‌ ಭಟ್‌ ಶುಭಾಸಂಶನೆಗೆ„ದರು. ಗಣೇಶ ಪ್ರಸನ್ನ ಮಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಹೆಚ್‌ ಜಗದೀಶ್‌ ರಾವ್‌ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com