ತ್ರಿಕೋಣ ಸರಣಿ: ಭಾರತ ಫೈನಲಿಗೆ

ಪೋರ್ಟ್‌ ಆಫ್ ಸ್ಪೇನ್‌: ಇಲ್ಲೀಗ ಸಾಗುತ್ತಿರುವ ತ್ರಿರಾಷ್ಟ್ರ ತ್ರಿಕೋಣ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಲಂಕೆಯನ್ನು ಕೆಚ್ಚೆದೆಯ ಹೋರಾಟದಲ್ಲಿ 81 ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿರುವ ಭಾರತ, ಫೈನಲ್‌ಗೆ ಪ್ರವೇಶಿಸಿದೆ.
     22ರ ಹರೆಯದ ಭುವನೇಶ್ವರ ಕುಮಾರ್‌ ಅವರು ಆರು ಓವರ್‌ಗಳಲ್ಲಿ ಕೇವಲ ಎಂಟು ರನ್‌ ನೀಡಿ ನಾಲ್ಕು ವಿಕೆಟ್‌ ಕಿತ್ತು ತಮ್ಮ ಈ ವರೆಗಿನ ಕ್ರಿಕೆಟ್‌ ಬಾಳ್ವೆಯ ಸರ್ವಶ್ರೇಷ್ಠ ನಿರ್ವಹಣೆಯನ್ನು ದಾಖಲಿಸಿ ಲಂಕೆಯ ಬೆನ್ನೆಲುಬು ಮುರಿದು ಭಾರತದ ವಿಜಯದಲ್ಲಿ ಪ್ರಧಾನ ಪಾತ್ರ ವಹಿಸಿದರು. 
      ನಿಗದಿತ 26 ಓವರ್‌ಗಳಲ್ಲಿ 178 ರನ್‌ ತೆಗೆಯುವ ಗುರಿ ಪಡೆದ ವರ್ಷಾಬಾಧಿತ ಈ ಪಂದ್ಯದಲ್ಲಿ ಲಂಕಾ 24.4 ಓವರ್‌ ಆಗುತ್ತಲೇ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 96 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. 
        ಭಾರತದ ಈ ವಿಜಯದಿಂದಾಗಿ ಆತಿಥೇಯ ವೆಸ್ಟ್‌ ಇಂಡೀಸ್‌ ಇದೀಗ ಈ ಕೂಟದಿಂದ ಹೊರಬಿದ್ದಿದೆ. ಲಂಕೆಯೇ ಫೈನಲ್‌ಗೆ ಬಂದಿದೆ. ಗುರುವಾರ ಫೈನಲ್‌ ಪಂದ್ಯ ನಡೆಯಲಿದೆ. 10 ಅಂಕಗಳಿಸಿರುವ ಭಾರತ ಈಗ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 
     ಮಳೆಯಿಂದ ನಿಲುಗಡೆ ಕಂಡಿದ್ದ ಭಾರತ ತನ್ನ ಇನ್ನಿಂಗ್ಸ್‌ನಲ್ಲಿ 29 ಓವರ್‌ಗಳ ಆಟವಾಡಿ 3 ವಿಕೆಟ್‌ ನಷ್ಟಕ್ಕೆ 119ರನ್‌ಗಳನ್ನು ಗಳಿಸಿತ್ತು. ರೋಹಿತ್‌ ಶರ್ಮಾ ಅಜೇಯ 48 ರನ್‌ಗಳಿಸಿದ್ದರು. 
        ಆ ಬಳಿಕ ಮಳೆಯಿಂದಾಗಿ ಪಂದ್ಯವನ್ನು 29 ಓವರ್‌ಗಳಿಗೆ ಸೀಮಿತಗೊಳಿಸಿ ಲಂಕೆಗೆ 178 ರನ್‌ ತೆಗೆಯುವ ಗುರಿಯನ್ನು ನಿಗದಿಸಲಾಗಿತ್ತು. ಲಂಕೆಯನ್ನು ಭಾರತ 167 ರನ್‌ಗೆ ಆಲೌಟ್‌ ಮಾಡಬೇಕಾದ ಅನಿವಾರ್ಯತೆ ಹೊಂದಿತ್ತು. ಆದರೆ 96 ರನ್‌ ತೆಗೆಯುವಷ್ಟರಲ್ಲೇ ಅದು ಆಲೌಟಾಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com