ದಾಖಲಾತಿ ಆಂದೋಲನ ಕಾರ್ಯಾಚರಣೆ

ಕುಂದಾಪುರ: ಸರ್ವ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಪೂರ್ತಿಧಾಮ ಸಂಸ್ಥೆ ಕೆದೂರು ಇವರು ಕುಂದಾಪುರ ತಾಲೂಕಿನ ಹಲವೆಡೆ ಜಂಟಿ ಕಾರ್ಯಾಚರಣೆ ನಡೆಸಿ ಶಿಕ್ಷಣ ವಂಚಿತ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಬುಧವಾರ ಬೆಳಗ್ಗೆ ನಡೆಸಿದರು.
     ಹಟ್ಟಿಯಂಗಡಿ ಕ್ರಾಸ್‌ ಸಮೀಪದ ಮುಂಡಗೋಡ ಪ್ರದೇಶದ ವಲಸೆ ಕಾರ್ಮಿಕರು ನೆಲೆಸಿರುವ ಟೆಂಟ್‌ಗೆ ಭೇಟಿ ನೀಡಿದ ವಿವಿಧ ಇಲಾಖೆ ಅಧಿಕಾರಿಗಳು ಶಿಕ್ಷಣ ವಂಚಿತ ಏಳು ಮಕ್ಕಳನ್ನು ವೀಕ್ಷಿಸಿ ಅವರ ಪಾಲಕರಿಗೆ ಶಿಕ್ಷಣದ ಅವಶ್ಯಕತೆ ತಿಳಿಸಿದರು. ಅಲ್ಲದೆ ಪಾಲಕರ ಸಮಕ್ಷಮದಲ್ಲಿ ಅವರನ್ನು ಕನ್ಯಾನ - ಗುಡ್ಡೆಯಂಗಡಿ ಅಂಗನವಾಡಿ ಕೇಂದ್ರಕ್ಕೆ ದಾಖಲು ಮಾಡಿಸಿದರು.
        ಈ ಸಂದರ್ಭ ಅಧಿಕಾರಿಗಳು ಮುಳ್ಳಿಕಟ್ಟೆ ಸಮೀಪದ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿ ವಾಸವಿರುವ ಸಾಗರದ ತ್ಯಾಗರ್ತಿ, ಹಾವೇರಿ ಶಿಗ್ಗಾಂವ್‌ ಮತ್ತು ರಾಣಿಬೆನ್ನೂರು ತಾಲೂಕಿನ ಸುಮಾರು 40 ಕುಟುಂಬಗಳ 25ಕ್ಕೂ ಹೆಚ್ಚಿನ ಮಕ್ಕಳ ಬಗ್ಗೆ ವಿಚಾರಿಸಿದರು.
        ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಸರ್ವ ಶಿಕ್ಷಣ ಅಭಿಯಾನ ಉಪಯೋಜನಾ ಸಮನ್ವಯಾಧಿಕಾರಿ ಪಿ. ನಾಗರಾಜ್‌, ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಎಂ.ಬಿ. ಗೌಡ, ಕುಂದಾಪುರ ಆರೋಗ್ಯಾಧಿಕಾರಿ ರಾಮ ರಾವ್‌, ಕುಂದಾಪುರದ ಕಾರ್ಮಿಕ ಇಲಾಖೆ ನಿರೀಕ್ಷಕ ಜೀವನ ಕುಮಾರ್‌, ಸರ್ವ ಶಿಕ್ಷಣ ಅಭಿಯಾನದ ಶಿವಾನಂದ ಮಯ್ಯ, ಕುಂದಾಪುರ ಬಿ.ಆರ್‌.ಪಿ. ವೇಣುಗೋಪಾಲ, ಪಧವೀದರ ಮುಖ್ಯ ಶಿಕ್ಷಕ ಬಿ. ಸುಧಾಕರ ಶೆಟ್ಟಿ, ಸ್ಪೂರ್ತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೇಶವ ಕೋಟೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com