ಕಲ್ಯಾಣ ಮಂಟಪಗಳಲ್ಲಿ ತಾರತಮ್ಯ ಸಲ್ಲದು: ಡಿವೈಎಸ್ಪಿ

ಕುಂದಾಪುರ: ಕಲ್ಯಾಣ ಮಂಟಪಗಳಲ್ಲಿ ಜಾತಿ ತಾರತಮ್ಯ ಮಾಡುತ್ತಿರುವ ಬಗ್ಗೆ ಪ್ರಕರಣಗಳು ದಾಖಲಾಗುತ್ತಿದ್ದು, ಇಂತಹ ಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ ಹಾಗೂ ಸಭಾಂಗಣಗಳ ಮಾಲಕರು ಎಚ್ಚರ ವಹಿಸಬೇಕು ಎಂದು ಕುಂದಾಪುರ ಡಿವೈಎಸ್ಪಿ ಯಶೋಧಾ ಎಸ್‌. ವಂಟಗೋಡಿ ಹೇಳಿದರು.
        ಅವರು ಕುಂದಾಪುರದ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಕರೆಯಲಾಗಿದ್ದ ತಾಲೂಕಿನ ಕಲ್ಯಾಣ ಮಂಟಪ ಹಾಗೂ ಸಭಾಂಗಣಗಳ ಮಾಲಕರ ಸಭೆಯಲ್ಲಿ ಮಾತನಾಡಿದರು.
     ವೃತ್ತ ನಿರೀಕ್ಷಕ ಮಂಜುನಾಥ ಕವರಿ ಮಾತನಾಡಿ, ಎಲ್ಲ ಕಲ್ಯಾಣ ಮಂಟಪಗಳಲ್ಲಿಯೂ ನಿಯಮಗಳನ್ನು ಮಾಡಿಕೊಳ್ಳಬೇಕು. ಎಲ್ಲರಿಗೂ ಒಂದೇ ರೀತಿಯ ವ್ಯವಸ್ಥೆಯಡಿ ಕೆಲಸ ನಿರ್ವಹಿಸಬೇಕಾಗಿದೆ. ಯಾವುದೇ ಸಂದರ್ಭದಲ್ಲಿಯೂ ಜಾತಿ ಬೇಧ, ಅಸ್ಪೃಶತೆ ಮಾಡುವುದನ್ನು ಕಾನೂನು ಸಹಿಸುವುದಿಲ್ಲ ಎಂದರು.
      ಅಮಾಸೆಬೈಲು, ಬೈಂದೂರು, ಶಂಕರನಾರಾಯಣ, ಕುಂದಾಪುರ, ಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಸಭಾಂಗಣಗಳ ಮಾಲಕರು ಹಾಗೂ ಪೊಲೀಸ್‌ ಅಧಿಕಾರಿಗಳು ಹಾಜರಿದ್ದರು. ಕುಂದಾಪುರ ಠಾಣೆಯ ಉಪನಿರೀಕ್ಷಕ ಜಯರಾಮ ಡಿ. ಗೌಡ ಸ್ವಾಗತಿಸಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com