ತಾಲೂಕಿನ ನಕ್ಸಲ್ ಸಕ್ರಿಯ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ

ಕುಂದಾಪುರ: ನಕ್ಸಲ್ ಸಪ್ತಾಹ ಹೆಸರಿನಲ್ಲಿ ನಕ್ಸಲರು ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮತ್ತೆ ಚಟುವಟಿಕೆ ಆರಂಭಿಸಿರುವ ಶಂಕೆಯ ಹಿನ್ನೆಲೆಯಲ್ಲಿ ತಾಲೂಕಿನ ನಕ್ಸಲ್ ಸಕ್ರಿಯ ಪ್ರದೇಶಗಳಲ್ಲಿ ಬಿರುಸಿನ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. 
          ಕುಂದಾಪುರ ಉಪವಿಭಾಗೀಯ ವ್ಯಾಪ್ತಿಯ ನಕ್ಸಲ್ ಪೀಡಿತ ಮಡಾಮಕ್ಕಿ, ಹಂಜ, ಶೇಡಿಮನೆ, ತೊಂಬಟ್ಟು, ಹೆನ್ನಾಬೆಲು, ಗಂಟುಬೀಳು, ಬಳ್ಮನೆ, ಗೋಳಿಕಾಡು, ಜಡ್ಡಿನಗದ್ದೆ, ಕೆಲಾ, ಭಾಗಿಮನೆ, ಯಡಮೊಗೆ, ದೇವರಬಾಳು, ಹಳ್ಳಿಹೊಳೆ, ಮುದೂರು, ಬಸ್ರಿಬೇರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಎಸ್ಪಿ ಡಾ.ಬೋರಲಿಂಗಯ್ಯ, ಎಎಸ್ಪಿ ಸಂತೋಷ್‌ಕುಮಾರ್ ಮಾರ್ಗದರ್ಶನದಲ್ಲಿ ಗುರುವಾರ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ನಾಕಾಬಂದಿ ಮಾಡಲಾಗಿದ್ದು ವಾಹನ ತಪಾಸಣೆ ಕಾರ್ಯ ಚುರುಕುಗೊಳಿಸಲಾಗಿದೆ. ಕುಂದಾಪುರ ಡಿವೆಎಸ್ಪಿ ಯಶೋದಾ ಎಸ್.ಒಂಟಗೋಡಿ, ಎಎನ್‌ಎಫ್ ಡಿವೆಎಸ್ಪಿ ವಿ.ಎಸ್.ನಾಯಕ್ ನೇತತ್ವದಲ್ಲಿ ಎಎನ್‌ಎಫ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯ್ಕ, ಕುಂದಾಪುರ ವತ್ತನಿರೀಕ್ಷಕ ಮಂಜುನಾಥ ಕವರಿ, ಬೈಂದೂರು ವೃತ್ತನಿರೀಕ್ಷಕ ಅರುಣ್ ಬಿ. ನಾಯಕ್, ಅಮಾವಾಸ್ಯೆಬೈಲು ಠಾಣಾಧಿಕಾರಿ ನಾಸಿರ್ ಹುಸೇನ್, ಶಂಕರನಾರಾಯಣ ಠಾಣಾಧಿಕಾರಿ ಸಾಯಿನಾಥ ರಾಣೆ, ಕೊಲ್ಲೂರು ಠಾಣಾಧಿಕಾರಿ ದೇವೇಂದ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com