ರೋಟರಿ ಸದಸ್ಯರ ಸಮಾಜ ಸೇವೆ ಶ್ಲಾಘನೀಯ

ಕುಂದಾಪುರ: ರೋಟರಿಯಂತಹ ಅಂತರಾಷ್ಟ್ರೀಯ ಮಟ್ಟದ ಸಮಾಜ ಸೇವಾ ಸಂಸ್ಥೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿರುವ ರೋಟರಿ ಸದಸ್ಯರ ಸೇವೆ ಹಾಗೂ ಸೇವಾ ಮನೋಭಾವ ಶ್ಲಾಘನೀಯ ಎಂದು ಉಡುಪಿಯ ನೇತ್ರ ತಜ್ಞ ಡಾ| ಕೃಷ್ಣ ಪ್ರಸಾದ ಹೇಳಿದರು.
      ಅವರು ತ್ರಾಸಿಯ ಮಿಲೇನಿಯಂ ಸಭಾಂಗಣದಲ್ಲಿ ಜರಗಿದ ಗಂಗೊಳ್ಳಿ ರೋಟರಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
        ಕಳೆದ ಅನೇಕ ವರ್ಷಗಳಿಂದ ಕಣ್ಣಿನ ಪೊರೆ ಹಾಗೂ ಕಣ್ಣಿಗೆ ಸಂಬಂಧಪಟ್ಟ ಚಿಕಿತ್ಸೆಗಳನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಗಂಗೊಳ್ಳಿ ಭಾಗದಲ್ಲಿ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿ ಈ ಭಾಗದ ರೋಗಿಗಳಿಗೆ ರೋಟರಿ ಆಶಾಕಿರಣವಾಗಬೇಕು. ಇಂತಹ ಶಿಬಿರಗಳಿಗೆ ಉಡುಪಿಯ ಪ್ರಸಾದ ನೇತ್ರಾಲಯ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
       ಅಸಿಸ್ಟೆಂಟ್‌ ಗವರ್ನರ್‌ ಟಿ.ಕೆ.ಎಂ.ಭಟ್‌ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಶುಭಾಶಂಸನೆಗೆ„ದರು. ಗಂಗೊಳ್ಳಿಯ ರೋಟರಿಯ ನೂತನ ಅಧ್ಯಕ್ಷರಾಗಿ ಉಪೇಂದ್ರ ಶೇರುಗಾರ್‌, ಕಾರ್ಯದರ್ಶಿಯಾಗಿ ರಾಮನಾಥ ನಾಯಕ್‌ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಜೋನಲ್‌ ಲೆಫ್ಟಿನೆಂಟ್‌ ಸತೀಶ್‌ ಎನ್‌. ಶೇರುಗಾರ್‌ ಶುಭ ಹಾರೈಸಿದರು. ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಿಕಟಪೂರ್ವ ಕಾರ್ಯದರ್ಶಿ ಪೆರಾಜೆ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.
     ನಿಕಟಪೂರ್ವ ಅಧ್ಯಕ್ಷ ಅಶೋಕ ದೇವಾಡಿಗ ಸ್ವಾಗತಿಸಿ, ಉಮೇಶ ಮೇಸ್ತ ನೂತನ ಸದಸ್ಯರನ್ನು ಪರಿಚಯಿಸಿದರು. ಆರ್‌.ಎನ್‌.ರೇವಣಕರ್‌ ಮತ್ತು ನಾರಾಯಣ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಥಾಮಸ್‌ ಪಿ.ಎ. ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರಾಮನಾಥ ನಾಯಕ್‌ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com