ಕ.ಸಾ.ಪ. ದತ್ತಿ ಪ್ರಶಸ್ತಿ: ಕೃತಿಗಳಿಗೆ ಆಹ್ವಾನ

ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಣ್ಯರು ಇರಿಸಿದ ದತ್ತಿನಿಧಿಯ ಬಡ್ಡಿಯಿಂದ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು ಇದಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ.
      5,000 ರೂ. ನಗದು ಹೊಂದಿರುವ 'ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ'ಯನ್ನು ಕನ್ನಡದಲ್ಲಿ ಪ್ರಕಟಣೆಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಗೆ ನೀಡ‌ಲಾಗುವುದು. 2012ನೇ ಸಾಲಿನಲ್ಲಿ ಪ್ರಕಟವಾದ ಡಾ| ಜಚನಿ ಸಮೀಕ್ಷೆ ಹಾಗೂ ಸಾಹಿತ್ಯ ಕುರಿತು ಬರೆದ ಕೃತಿಗೆ 10,000 ರೂ. ನಗದು ಒಳಗೊಂಡ ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ನೀಡಲಾಗುವುದು. 2012ನೇ ಸಾಲಿನಲ್ಲಿ ಕನ್ನಡದಲ್ಲಿ ಪ್ರಕಟವಾದ ಶ್ರೇಷ್ಠ ಕಾದಂಬರಿಗೆ 5,000 ರೂ. ಒಳಗೊಂಡ 'ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ' ನೀಡಲಾಗುವುದು.
         ಪ್ರತಿ ಪ್ರವೇಶಕ್ಕೆ ಮೂರು ಪುಸ್ತಕಗಳನ್ನು ಕಳುಹಿಸಬೇಕು, ಪುಸ್ತಕಗಳನ್ನು ಕಳುಹಿಸಲು ಆ. 30 ಕೊನೆಯ ದಿನ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080-26623584 ಹಾಗೂ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com