ಜಪಾನ್‍ಗೆ ಅಂತರಾಷ್ಟ್ರೀಯ ಗೊಂಬೆಯಾಟ ಕಲಾವಿದ ಭಾಸ್ಕರ್ ಕೊಗ್ಗ ಕಾಮತ್

ಜಪಾನ್  ದೇಶದಲ್ಲಿ  ಉಪ್ಪಿನಕುದ್ರು  ಗೊಂಬೆಯಾಟ ತಂಡದ ಪ್ರಾತ್ಯಕ್ಷಿಕೆ, ಪ್ರದರ್ಶನ
 
 ಕರಾವಳಿಯ ಜಾನಪದ ಕಲೆಗಳಲ್ಲೇ ವಿಶೇಷವಾದಂತಹ ಯಕ್ಷಗಾನ ಗೊಂಬೆಯಾಟ ಕಲೆಯನ್ನು ಕಳೆದ 350 ವರ್ಷಗಳಿಂದ ಜತನದಿಂದ ಕಾಪಾಡಿಕೊಂಡು ಬಂದ ಕಲೆಯ ತವರೂರು ಉಪ್ಪಿನಕುದ್ರುವಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ಜುಲೈ 24ರಂದು ಜಪಾನ್ ಪ್ರವಾಸ ಕೈಗೊಳ್ಳಲಿದೆ.
       ಅಂತರಾಷ್ಟ್ರೀಯ ಮಟ್ಟದಲ್ಲಿ  ಯಕ್ಷಗಾನ ಗೊಂಬೆಯಾಟ ಜಾನಪದ ಕಲೆಯನ್ನು ನಿರಂತರವಾಗಿ ಪ್ರದರ್ಶಿಸಿ, ಜನ ಮೆಚ್ಚುಗೆ ಪಡೆದ ಈ ತಂಡ ಈವರೆಗೆ ಹತ್ತು ಹಲವು ಬಾರಿ ವಿದೇಶ ಪ್ರವಾಸ ಮಾಡಿದೆ. ಈಗ ಅಂತರಾಷ್ಟ್ರೀಯ ಖ್ಯಾತಿಯ ಭಾಸ್ಕರ್ ಕೊಗ್ಗ ಕಾಮತರ ನೇತೃತ್ವದಲ್ಲಿ ಮಾಡರ್ನ್ ಪಪ್ಪೆಟ್ ಸೆಂಟರ್ ಕಾವಸಾಕಿ, ಜಪಾನ್‍ನ ಪ್ರಾಯೋಜಕತ್ವದಲ್ಲಿ ಮತ್ತೆ ಜಪಾನ್ ದೇಶಕ್ಕೆ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಲು ತೆರಳಲಿದೆ. ಈ ಸಂದರ್ಭ 20ದಿನಗಳ ಪ್ರವಾಸದಲ್ಲಿ ಕಾಮತರು 10 ದಿನಗಳ ಕಾಲ ಗೊಂಬೆಯಾಟ ಪ್ರಾತ್ಯಕ್ಷಿಕೆ, ವಿಚಾರ ಗೋಷ್ಟಿಯನ್ನು ವಿವಿಧ ನಗರಗಳಲ್ಲಿ ನಡೆಸಿ ಕೊಡಲಿದ್ದಾರೆ. ಹಾಗೇ ಆಗಸ್ಟ್ 5 ರಿಂದ 15 ರ ವರೆಗೆ ಜಪಾನಿನ ಲಿಡಾ ಅಂತರಾಷ್ಟ್ರೀಯ ಗೊಂಬೆಯಾಟ ಉತ್ಸವದಲ್ಲಿ ತಂಡ ಪ್ರದರ್ಶನ ನೀಡಲಿರುವುದು ಭಾರತದ ಹೆಮ್ಮೆಯ ಸಂಗತಿಯಾಗಿದೆ. ಅಲ್ಲಿನ ನಕೋಯಾ, ಒಸಾಕಾ, ಟೋಕಿಯೋ, ಕವಾಸಾಕಿ, ನಾಗಸಾಕಿ ಮುಂತಾದ ಪ್ರಮುಖ ನಗರಗಳಲ್ಲಿ ಗೊಂಬೆಯಾಟ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಫ್ರಾನ್ಸ್ ಹಾಗೂ  ಜಪಾನ್ ದೇಶದಲ್ಲಿ ಯಶಸ್ವಿಯಾಗಿ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಿದ ಈ ತಂಡ ಭಾರತದ ಗ್ರಾಮೀಣ ಕಲೆಯನ್ನು ಅಂತರಾಷ್ರೀಯ ಮಟ್ಟದಲ್ಲಿ ಪ್ರದರ್ಶನವನ್ನು ನೀಡಿ ಬಾರತದ ವೈಶಿಷ್ಟ್ಯತೆಯನ್ನು ಸಾರುವ ಮೂಲಕ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com