ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷಾ ತರಬೇತಿ

 ಕುಂದಾಪುರ: ಜೀವನದಲ್ಲಿ ಹೋರಾಟದ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಣಿಪಾಲದ ಮಣಿಪಾಲ ಎಜ್ಯುರೈಟ್ ಸಹಯೋಗದಲ್ಲಿ ಆರಂಭಿಸಲಾದ  ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
     ಹೋರಾಟದ ಪ್ರವೃತ್ತಿಯಿಂದ ನಾವು ಮುಟ್ಟಬೇಕಾದ ಗುರಿಯನ್ನು ನಿಚ್ಛಳವಾಗಿ ಮುಟ್ಟಬಹುದು. ಅದಕ್ಕೆ ಪೂರಕವಾಗಿ  ನಿರಂತರ  ಪ್ರಯತ್ನದ ಜೊತೆಗೆ ವಿಷಯದ ಗ್ರಹಿಕೆಯು ಅಷ್ಟೇ ಮುಖ್ಯ. ಹಾಗೆಯೇ ಒದಗಿಸಿದ ಸೌಲಭ್ಯಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು. ಸಂಸ್ಥೆಗೆ ಒಳ್ಳೆಯ ಕೀರ್ತಿಯನ್ನು ತರುವಂತಾಗಬೇಕು ಎಂದು ಹೇಳಿದರು.
   ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀ ಸದಾನಂದ ಛಾತ್ರ ಮಾತನಾಡಿ ನಾವು ಕೊಡಮಾಡುವ ಸೌಲಭ್ಯಗಳನ್ನು ಉಪಯೋಗೊಸಿಕೊಳ್ಳಿ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷಾ ತರಬೇತಿಯನ್ನು ಕುಂದಾಪುರದ ವಿದ್ಯಾರ್ಥಿಗಳಿಗೆÉೂದಗಿಸಿಕೊಟ್ಟಿರುವುದು ತುಂಬಾ ಹೆಮ್ಮೆಯಾಗಿದೆ. ಮನಸ್ಸಿಟ್ಟು ಕಲಿಯಿರಿ ಎಂದು ಹೇಳಿದರು.
    ಮಣಿಪಾಲ ಎಜ್ಯುರೈಟ್‍ನ ಸಂಯೋಜಕಿ ಶ್ರೀಮತಿ ಉಷಾ ಪೈ ಮಾತನಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಕಷ್ಟಪಟ್ಟು ದುಡಿಯಿರಿ. ಸವಾಲುಗಳನ್ನು ಎದುರಿಸಲು ಚೆನ್ನಾಗಿ ಓದಿ ಜೀವನದಲ್ಲಿ ಮುಂದೆ ಬನ್ನಿ ಎಂದರು.
        ಈ ಸಂದರ್ಭದಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀ ಕೆ.ದೇವದಾಸ ಕಾಮತ್, ಶ್ರೀ ಕೆ.ಶಾಂತಾರಾಮ್ ಪ್ರಭು ಶ್ರೀ ರಾಜೆಂದ್ರ ತೋಳಾರ್  ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
     ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಿ.ಎಂ.ಗೊಂಡ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಸರೋಜ ಎಂ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com