ರಾಜ್ಯ ಶಾಸ್ತ್ರ ಉಪನ್ಯಾಸಕರಿಗೆ ಉಪಗೃಹ ಆಧಾರಿತ ತರಬೇತಿ

ಕುಂದಾಪುರ: ತಾಲೂಕಿನ ರಾಜ್ಯ ಶಾಸ್ತ್ರ ಉಪನ್ಯಾಸಕರಿಗೆ ನೂತನ ಪಠ್ಯಕ್ರಮಕ್ಕನುಸಾರವಾಗಿ  ಉಪಗೃಹ ಆಧಾರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.
       ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಕಡ್ಡಾಯ ಶಿಕ್ಷಣ, ಮಾಹಿತಿ ಹಕ್ಕು, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಕೌಟುಂಬಿಕ ನ್ಯಾಯಾಲಯ, ಲೋಕಅದಾಲತ್ ವಿಷಯದ ಬಗ್ಗೆ ಹೆಸರಾಂತ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಉಪಗೃಹದ ಮೂಲಕ ತರಬೇತಿ ಪಡೆದುಕೊಳ್ಳಲಾಯಿತು.
       ಉಪನ್ಯಾಸಕರಿಗೆ ಅಗತ್ಯ ಮಾಹಿತಿಗಳಾದ ಸಾರ್ವಜನಿಕರಿಗೆ ಮೂಲಭೂತ ಹಕ್ಕುಗಳ ವಂಚನೆ,ದುರ್ಬಲ ವರ್ಗದವರ ಶೋಷಣೆ, ಅನ್ಯಾಯಕ್ಕೊಳಗಾದ ಅನಕ್ಷರಸ್ಥರು, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವುದು ಹಾಗೂ ಸಾರ್ವಜನಿಕರಿಗೆ ಅನ್ಯಾಯವಾದಾಗ ಮೊಕದ್ದಮೆ  ಹೇಗೆ ದಾಲಿಸುವುದು. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ  ನಗರ ಪ್ರದೇಶದಲ್ಲಿ ಕೌಟುಂಬಿಕ ನ್ಯಾಯಾಲಯದ ಬಗ್ಗೆ ಮಾಹಿತಿ, ಕಾನೂನಿನ ತಳಹದಿ ಬಿಟ್ಟು ಮಾನವೀಯ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುವ ಲೋಕ ಅದಾಲತ್, ಕಡ್ಡಾಯ ಶಿಕ್ಷಣ ಅಳವಡಿಸಿಕೊಳ್ಳುವಲ್ಲಿ ಸರ್ಕಾರ, ಶಾಲೆ, ವಿದ್ಯಾರ್ಥಿ, ಪೋಷಕರ ಜವಾಬ್ದಾರಿಯ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಲಾಯಿತು.
     ಇದೇ ಸಂದರ್ಭದಲ್ಲಿ ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಪ್ರಸಕ್ತ ವಿಷಯಗಳನ್ನು ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಶೀಘ್ರದಲ್ಲಿಯೇ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ನಡೆಸುವ ಬಗ್ಗೆ ತಾಲೂಕು ರಾಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಗೂ ಕೊಲ್ಲೂರು ಮೂಕಾಂಬಿಕಾ ಪಪೂ ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ್ ಶೆಟ್ಟಿ ಅವರ ನೇತ್ರತ್ವದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
       ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಯೋಜಕರಾದ ಪ್ರಾಂಶುಪಾಲ ಜಿ.ಸುಬ್ರಹ್ಮಣ್ಯ ಜೋಷಿ, ವಿಷಯ ಸಂಯೋಜಕ ಹರೀಶ್ ನಾಯಕ್, ವೆಂಕಟರಮಣ ನಾಯಕ್, ಅರುಣ್ ಕುಮಾರ್, ಸುಧಾಕರ್ ವಕ್ವಾಡಿ, ಪಾಂಡುರಂಗ, ಸಂದ್ಯಾ ನಾಯಕ್, ಉಮಾ.ಟಿ, ದಿನೇಶ್ ಮುಂತಾದ ಹಿರಿಯ ಉಪನ್ಯಾಸಕರು ಪಾಲ್ಗೊಂಡರು. ತಾಲೂಕಿನ ಎಲ್ಲಾ ರಾಜ್ಯ ಶಾಸ್ತ್ರ ಉಪನ್ಯಾಸಕರು ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು.
ಪೊಟೋ; ಇದೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com