ಸಾರಥಿ ನಂ.1 ಪ್ರಶಸ್ತಿಗೆ ಅರ್ಜಿ ಆಹ್ವಾನ

ಕುಂದಾಪುರ: ಇಂಡಿಯನ್‌ ವೆಹಿಕಲ್ಸ್‌ ಡ್ರೆ çವರ್ ಟ್ರೇಡ್‌ ಯೂನಿಯನ್‌ ವತಿಯಿಂದ ವಿಶ್ವ ಕಾಯಕ ಚಾಲಕ ದಿನಾಚರಣೆ ಅಂಗವಾಗಿ ನೀಡಲಾಗುವ ಸಾರಥಿ ನಂ.1 ಪ್ರಶಸ್ತಿಗೆ ಚಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.
      ಚಾಲಕರು ತಮ್ಮ ವೃತ್ತಿ ಜೀವನದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಆ್ಯಂಬುಲೆನ್ಸ್‌, ಅಗ್ನಿಶಾಮಕ, ಇಂಧನ, ಗ್ಯಾಸ್‌, ಜೆಸಿಬಿ, ಕ್ರೇನ್‌, ಹಾಲು ಮತ್ತು ಐಟಿಬಿಟಿ ಪ್ರಯಾಣಿಕರನ್ನು ಸಾಗಿಸುವ, ಸರಕು ಸಾಗಣೆಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು ಸೇರಿದಂತೆ ಎಲ್ಲ ವರ್ಗದ ಚಾಲಕರು ಅರ್ಜಿ ಸಲ್ಲಿಸಬಹುದು.
       ಪ್ರಶಸ್ತಿ ಚಿನ್ನ, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಈ ಹಿಂದೆ ಯಾವುದಾದರೂ ಪ್ರಶಸ್ತಿ ಪಡೆದಿದ್ದಲ್ಲಿ ಅದರ ಜೆರಾಕ್ಸ್‌ ಪ್ರತಿ, ಸೇವೆಯ ಕುರಿತು ಪ್ರತಿಕೆಗಳಲ್ಲಿ ಪ್ರಕಟವಾಗಿದ್ದರೆ ಅದರ ಜೆರಾಕ್ಸ್‌ ಪ್ರತಿ, ಎರಡು ಫೋಟೋ, ಡಿ.ಎಲ್‌. ಜೆರಾಕ್ಸ್‌ ಪ್ರತಿಯನ್ನು ಲಗತ್ತಿಸಿ ಜು. 20ರ ಒಳಗಾಗಿ ಕಳುಹಿಸಿಕೊಡಬೇಕು. ಜು. 27ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
      ಅರ್ಜಿ ಸಲ್ಲಿಸಬೇಕಾದ ವಿಳಾಸ: ಇಂಡಿಯನ್‌ ವೆಹಿಕಲ್ಸ್‌ ಡ್ರೈವರ್ ಟ್ರೇಡ್‌ ಯೂನಿಯನ್‌, ನಂ. 29/1, 2ನೇ ಮಳಿಗೆ, 1ನೇ ಮಹಡಿ, ಶ್ರೀ ಲಾಡ್ಜ್ ಬಿಲ್ಡಿಂಗ್‌, ಕಾಂತಿಸ್ವೀಟ್ಸ್‌ ಹತ್ತಿರ, ಕೆಂಪೇಗೌಡ ಸರ್ಕಲ್‌, ಬೆಂಗಳೂರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com