ಧಾರ್ಮಿಕ ದರ್ಪಣ ಕೃತಿ ಲೋಕಾರ್ಪಣೆ

ಕುಂದಾಪುರ: ಬೆಂಗಳೂರಿನ ಅಘೋಚರ ಪತ್ರಿಕೆಯ ಸಂಪಾದಕ ಕೆ. ನಾಗೇಶ್‌ ಚಡಗ ಅವರ ಪತ್ರಿಕಾ ವೃತ್ತಿ ಜೀವನದ 25ನೇ ವರ್ಷದ ಪ್ರಯುಕ್ತ ಬೆಂಗಳೂರಿನ ರೋಹಿತ್‌ ಪ್ರಕಾಶನದ ಮೂಲಕ ಹೊರತಂದಿರುವ ಕೋಟೇಶ್ವರದ ವಿಚಾರಪೂರ್ಣ ಧಾರ್ಮಿಕ ಲೇಖಕ ವೈ.ಎನ್‌. ವೆಂಕಟೇಶಮೂರ್ತಿ ಭಟ್ಟರ 60 ಅಮೂಲ್ಯ ಧಾರ್ಮಿಕ ಲೇಖನಗಳ ಸಂಗ್ರಹ ಧಾರ್ಮಿಕ ದರ್ಪಣವನ್ನು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಾಡಿನ ಹಿರಿಯ ಸಂಶೋಧಕ ಡಾ| ಚಿದಾನಂದಮೂರ್ತಿಯವರು ಲೋಕಾರ್ಪಣೆಗೊಳಿಸಿದರು.
       ಈ ಸಂದರ್ಭದಲ್ಲಿ ಶ್ರೀ ಡಾ| ವಿಶ್ವಸಂತೋಷ ಭಾರತೀ ಶ್ರೀಪಾದರು, ನಾಡಿನ ಹಿರಿಯ ಸಾಹಿತಿ ಕೋಟೇಶ್ವರ ಸೂರ್ಯನಾರಾಯಣ ರಾವ್‌, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ಲಕ್ಷಿ$¾àನಾರಾಯಣ ಅಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್‌ ರಾಜಾಧ್ಯಕ್ಷ ಪುಂಡಲೀಕ ಹಾಲಂಬಿ, ಬಸೂÅರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ , ಕರ್ನಾಟಕ ಪ್ರದೇಶ ಹೊಟೇಲ್‌ ಉಪಾಹಾರ ಮಂದಿರಗಳ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯಾಯ, ರೋಹಿತ್‌ ಪ್ರಕಾಶನದ ಕೆ. ನಾಗೇಶ್‌ ಚಡಗ, ಧಾರ್ಮಿಕ ದರ್ಪಣ ಲೇಖಕ ವೈ.ಎನ್‌. ವೆಂಕಟೇಶಮೂರ್ತಿ ಭಟ್ಟ ಹಾಗೂ ನಾಡಿನ ಹಿರಿಯ ಕಿರಿಯ ಸಾಹಿತಿಗಳು ಉಪಸ್ಥಿತರಿದ್ದರು.
     ಈ ಸಂದರ್ಭದಲ್ಲಿ ಧಾರ್ಮಿಕ ದರ್ಪಣ ಲೇಖಕ ಕೋಟೇಶ್ವರ ದೊಡ್ಮನೆಯ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಅರ್ಚಕ ವೈ.ಎನ್‌.ವೆಂಕಟೇಶಮೂರ್ತಿ ಭಟ್ಟ ಅವರನ್ನು ಬೆಂಗಳೂರಿನ ಅಘೋಚರ ಪತ್ರಿಕೆ ಮತ್ತು ರೋಹಿತ್‌ ಪ್ರಕಾಶನದ ಸಂಪಾದಕ ಕೆ. ನಾಗೇಶ್‌ ಚಡಗ ಅವರು ಸಮ್ಮಾನಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com