ಕುಂದಾಪುರ: ಪಡಿತರ ಚೀಟಿ ನೀಡುವ ಸಂದರ್ಭದಲ್ಲಿ ಅಧಿಕ ಶುಲ್ಕ ಸಂಗ್ರಹಿಸುತ್ತಿರುವ ವಿರುದ್ಧ ಗ್ರಾಮಸ್ಥರು ಶನಿವಾರ ಮರವಂತೆ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.
ಮರವಂತೆ ಗ್ರಾಮ ಪಂಚಾಯತ್ನಲ್ಲಿ ಸಿಬಂದಿ ಪಡಿತರಚೀಟಿ ನೀಡುವ ಸಂದರ್ಭದಲ್ಲಿ ನಿಯಮಕ್ಕಿಂತ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ ಮತ್ತು ಅದಕ್ಕೆ ಸೂಕ್ತ ರಶೀದಿ ನೀಡಲಾಗಿಲ್ಲ , ಅಲ್ಲದೇ ಅವರು ಒರಟಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ.ನಲ್ಲಿ ಸಭೆ ನಡೆಯುತ್ತಿದ್ದು, ಈ ನಡುವೆ ಪ್ರತಿಭಟನಾ ನಿರತ ಪ್ರಮುಖರ ಜತೆ ಗ್ರಾ.ಪಂ.ಅಧ್ಯಕ್ಷೆ ಕೆ.ಎ. ಸುಗುಣ, ಸದಸ್ಯರು ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಅವರು ಮಾತುಕತೆ ನಡೆಸಿದರು.
ಗ್ರಾ.ಪಂ.ಸದಸ್ಯರಿಂದ ನಿಂದನೆ
ಈ ಮಧ್ಯೆ ಗ್ರಾ.ಪಂ.ಸದಸ್ಯರೊಬ್ಬರು ಮಧ್ಯೆ ಪ್ರವೇಶಿಸಿ ನಿಂದಿಸಿ ಮಾತನಾಡಿದ್ದರಿಂದ ಸ್ವಲ್ಪ ಬಿಗು ವಾತಾವರಣ ಸೃಷ್ಠಿಯಾಯಿತು. ಅನಂತರ ಮಾತುಕೆತೆ ಮೂಲಕ ಬಗೆಹರಿಸಲಾಯಿತು. ಈ ನಡುವೆ ಮಾತನಾಡಿದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್. ಜನಾರ್ದನ್ ಅವರು ಈ ತನಕ 61 ಪಡಿತಚೀಟಿ ನವೀಕರಣ ನಡೆದಿದೆ. ತಪ್ಪುಗ್ರಹಿಕೆಯಿಂದ ಅಧಿಕ ಶುಲ್ಕ ಸಂಗ್ರಹಿಸುವುದು ಪಂಚಾಯತ್ನ ಗಮನಕ್ಕೆ ಬಂದಿದೆ. ಹೀಗೆ ಸಂಗ್ರಹಿಸುವುದು ಕಾನೂನು ಬಾಹಿರ . ನಿಗದಿತ ಶುಲ್ಕಕ್ಕಿಂತ ಹೆಚ್ಚಾಗಿ ಸಂಗ್ರಹಿಸಿದ ಶುಲ್ಕವನ್ನು ಹಿಂತಿರುಗಿಸಲಾಗುವುದು ಎಂದರು. ಗ್ರಾಮಸ್ಥರು ಯಾವುದೇ ದೂರುಗಳಿದ್ದರೆ ಅಧ್ಯಕ್ಷೆ ಅಥವಾ ಪಿಡಿಓ ಅವರಿಗೆ ಬರಹದ ಮೂಲಕ ತಲುಪಿಸಬೇಕೆಂದು ವಿನಂತಿಸಿದರು.
0 comments:
Post a Comment