ಸೈಂಟ್‌ ಥೋಮಸ್‌ ವಸತಿ ಶಾಲೆ:ದೂರದೃಷ್ಟಿತ್ವದ ಚಿಂತನೆಯಿಂದ ಅಭಿವೃದ್ದಿ- ಶಾಸಕ ಕೆ.ಗೋಪಾಲ ಪೂಜಾರಿ

ಬೈಂದೂರು: ಶೈಕಣಿಕ ಪ್ರಗತಿಯಿಂದ ಗ್ರಾಮದ ಅಭಿವೃದ್ದಿ ಸಾದ್ಯ. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸಿ ಸಾಧನೆಗೈದ ಹೆಗ್ಗಳಿಕೆ ಸೈಂಟ್‌ ಥೋಮಸ್‌ ಆಂಗ್ಲ ಮಾಧ್ಯಮ ಶಾಲೆಯದ್ದಾಗಿದೆ. ದೂರದೃಷ್ಟಿತ್ವದ ಚಿಂತನೆಯಿಂದ ಅಭಿವೃದ್ದಿ ಸಾದ್ಯ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ನುಡಿದರು.

ಆವರು ಬೈಂದೂರು ಸೈಂಟ್‌ ಥೋಮಸ್‌ ವಸತಿ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಗುಣಮಟ್ಟದ ಶಿಕ್ಷಣದಿಂದಾಗಿ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ. ಸಂಸ್ಥೆಯ ಯಶಸ್ಸಿಗೆ ಆಡಳಿತ ಮಂಡಳಿಯ ಪರಿಶ್ರಮ ಮುಖ್ಯವಾಗಿರುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ಬಿಷಪ್‌ ರೆ.ಫಾ .ಜೀವರ್ಗಿಸ್‌ ಮಾರ್‌ ಡಿವಾನೋಸಿಸ್‌ ಹದಿಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಸಂಸ್ಥೆಯು ಪ್ರತಿಷ್ಟಿತ ಸಂಸ್ಥೆಯಾಗಿ ಮೂಡಿಬರಲು ಸಾರ್ವಜನಿಕರ ಸಹಕಾರ ಹಾಗೂ ಜವಬ್ದಾರಿಯುತ ವೆÂಕ್ತಿಗಳ ಪರಿಶ್ರಮ ಮುಖ್ಯವಾಗಿದೆ. ನಿಷ್ಕಲ್ಮಶವಾದ ಸೇವೆ ಬದುಕಿನ ಗೌರವವನ್ನು ವೃದ್ದಿಸುತ್ತದೆ ಎಂದರು.

ವರ್ಗಾವಣೆ ಹೊಂದಿದ ರೆ.ಫಾ ಪಿಲಿಪ್‌ ನೆಲ್ಲಿವಿಳರವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷ, ಸುಜಾತಾ ರಾವ್‌, ಅನುಸಾಜು, ವಿದ್ಯಾರ್ಥಿ ಪ್ರತಿನಿಧಿ ಜೆಸ್ಮಿ ಜೋಸೆಪ್‌, ರೆ.ಫಾ, ಅಬ್ರಾಹಂ ಕಾಲ್‌ಪಟ್‌ ಉಪಸ್ಥಿತರಿದ್ದರು.

ಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಡಾ.ಎಲ್ಡೋ ಪುತೆನ್‌ ಕಂಡತ್ತಿಲ ಸ್ವಾಗತಿಸಿದರು. ರಮೇಶ ಪೂಜಾರಿ ಧನ್ಯವಾದಗೈದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com