ಗ್ರಾಮಾಂತರ ಯುವಕ ಯುವತಿಯರಿಗೆ ತರಬೇತಿ ಶಿಬಿರ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2013-14ನೇ ಸಾಲಿನಲ್ಲಿ ಗ್ರಾಮಾಂತರ ಯುವಕ ಯುವತಿಯರಿಗೆ ವಿವಿಧ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
       ವ್ಯಕ್ತಿತ್ವ ವಿಕಸನ, ಆತ್ಮಸ್ಥೆರ್ಯ, ಸಾಮಾಜಿಕ ಬದ್ಧತೆ, ಮುನ್ನಡೆ, ವಿಷಯ, ಪ್ರಸಾರ, ಭಾಷಣ, ಕೌಶಲ, ಮಾನವೀಯ ಸಂಬಂಧಗಳು, ಪರಿಣಾಮಕಾರಿ ಮತ್ತು ಸಂವಹನದ ಅಡೆತಡೆಗಳು, ಯಶಸ್ವಿ ಕಾರ್ಯಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು. ವಯೋಮಿತಿ 15ರಿಂದ 35 ವರ್ಷ ವಯಸ್ಸಿನ ಒಳಗಿರಬೇಕು. ಜಿಲ್ಲೆಯ ಗ್ರಾಮಾಂತರ ಯುವತಿಯರಿಗೆ ಜು. 9ರಿಂದ 18ರ ತನಕ ಯುವ ಸಂವಹನ, 19ರಿಂದ 28ರ ತನಕ ಪ್ರಶಿಕ್ಷಕರ ತರಬೇತಿ, ಯುವಕರಿಗೆ 29ರಿಂದ ಆ. 7ರ ತನಕ ಯುವಚೇತನ ಶಿಬಿರಗಳನ್ನು ಬೆಂಗಳೂರು, ಕುಂಬಳಗೋಡು ಯುವಜನ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಬಸ್‌ ದರ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಆಸಕ್ತರು ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮತ್ತು ಅಜ್ಜರಕಾಡು, ಉಡುಪಿ- ಇವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com