ನನ್ನ ಶಾಲೆ -31 ನೇ ಸಂಚಿಕೆ ಅನಾವರಣ

ಕುಂದಾಪುರ: ವಲಯದ ಯಡಾಡಿ ಮತ್ಯಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಿತ್ ಹೆಗ್ಡೆ  ಇವರು ಪ್ರಾಯೋಜಿಸಿದ  ‘ನನ್ನ ಶಾಲೆ’ ಮಾಸಿಕ ಹಸ್ತ ಪತ್ರಿಕೆಯ 31ನೇ ಸಂಚಿಕೆ ಹಾಗೂ ತರಗತಿವಾರು ಮಾಸಿಕ ಹಸ್ತಪತ್ರಿಕೆಗಳಾದ ಮಾರ್ಗದರ್ಶಿ, ಇತಿಹಾಸ, ನಿರೀಕ್ಷೆ, ನಿಯಮ, ನಮ್ಮ ಆಸೆಗಳನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಮೋಹನ್ ಶೆಟ್ಟಿ ಅನಾವರಣಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸತೀಶ್ ಅಡಿಗರು ವಹಿಸಿದ್ದು, ಕುಂದಾಪುರ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ  ಸತೀಶ್ ಶೆಟ್ಟಿಗಾರ್, ವೇಣುಗೋಪಾಲ ಹೆಗ್ಡೆ, ಸಮೂಹ ಸಂಪನ್ಮೂಲ ವ್ಯಕ್ತಿ  ಕುಶಲ ಶೆಟ್ಟಿ, ಮಾವಿನ ಕಟ್ಟೆ ಶಾಲಾ ಶಿಕ್ಷಕಿ ಸವಿತಾ, ಮುಖ್ಯ ಶಿಕ್ಷಕಿ ಇಂದಿರಾ, ಎಸ್.ಡಿ.ಎಂ.ಸಿ ಸದಸ್ಯರಾದ ಪ್ರಭಾಕರ ಆಚಾರ್ಯ, ಆಶಾ ಹಾಗೂ ಪೋಷಕರು. ಶಾಲಾ ಶಿಕ್ಷಕರಾದ ಗಂಗಮ್ಮಎಸ್.ಶೆಟ್ಟಿ, ಆಶಾ, ಸುಕನ್ಯಾ, ರಮಣಿ, ಹೆಚ್.ದಿನಕರ ಶೆಟ್ಟಿ, ಸುಧಾಕರ ಶೆಟ್ಟಿ ಮತ್ತು ಗೌರವ ಶಿಕ್ಷಕಿ ಕಲ್ಪನಾ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ  ಇಂದಿರಾ ಸ್ವಾಗತಿಸಿದರು. ಹೆಚ್.ದಿನಕರ ಶೆಟಿ ್ಟಕಾರ್ಯಕ್ರಮ ನಿರೂಪಿಸಿದರು.  ಆಶಾ ಇವರು ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com