ಬೈಂದೂರು: ಕೂಟಮಹಜಗತ್ತು ಸಾಲಿಗ್ರಾಮ ಇದರ ಕಿರಿಮಂಜೇಶ್ವರ ಅಂಗಸಂಸ್ಥೆಯ ವಾರ್ಷಿಕ ಅಧಿವೇಶನ ಇತ್ತೀಚಿಗೆ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಜರುಗಿತು.
ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉಲ್ಲೇಖನೀಯ ಸೇವೆ ಸಲ್ಲಿಸಿದ ಉಪ್ಪುಂದ ದೀಟೀ ಸೀತಾರಾಮಯ್ಯರನ್ನು ಸನ್ಮಾನಿಸಲಾಯಿತು. ಅಂಗಸಂಸ್ಥೆಯ ಅಧ್ಯಕ್ಷ ಗಣೇಶ ಮಯ್ಯ ಹಾಗೂ ಕಾರ್ಯದರ್ಶಿ ಮಂಜುನಾಥ ಹೊಳ್ಳ ಸನ್ಮಾನಿತರನ್ನು ಫಲತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಿದರು. ಸಮಾಜಕ್ಕೆ ತನ್ನಿಂದ ಕಿಂಚಿತ್ತು ಸೇವೆ ಸಲ್ಲಿಸಿದ ತೃಪ್ತಿಯಿದೆ ಎಂದು ಸನ್ಮಾನ ಸ್ವೀಕರಿಸಿ ಭಾವುಕರಾಗಿ ದೀಟೀ ಎಸ್ ನುಡಿದರು.
ಈ ಸಂಧರ್ಭದಲ್ಲಿ ಸಾಲಿಗ್ರಾಮ ಸಂಸ್ಥೆಯ ಕೋಶಾಧಿಕಾರಿ ತಾರಾನಾಥ ಹೊಳ್ಳ, ಲಕ್ಷ್ಮೀನಾರಾಯಣ ಹೊಳ್ಳ, ಸುಬ್ರಹ್ಮಣ್ಯ ನಾವಡ, ವಾಸುದೇವ ಕಾರಂತ ಉಪಸ್ಥಿತರಿದ್ದರು.
0 comments:
Post a Comment