ಯಡಾಡಿ ಮತ್ಯಾಡಿ ಶಾಲೆಗೆ ಎಸ್.ಬಿ.ಎಂ ವತಿಯಿಂದ ಫ್ಯಾನ್‍ ಕೊಡುಗೆ

ಕುಂದಾಪುರ: ವಲಯದ ಯಡಾಡಿ ಮತ್ಯಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಇವರು ಶಾಲೆಗೆ ಕೊಡುಗೆಯಾಗಿ ನೀಡಿದ 5 ಫ್ಯಾನ್‍ಗಳ ವಿತರಣಾ ಸಮಾರಂಭವು ಇತ್ತೀಚೆಗೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸತೀಶ್ ಅಡಿಗರ ಅಧ್ಯಕ್ಷತೆಯಲ್ಲಿ ಜರುಗಿತು.
ಸ್ಟೇಟ್ ಬ್ಯಾಂಕ್‍ಆಫ್ ಮೈಸೂರು ಇದರ ಮ್ಯಾನೇಜರ್‍ಆದರಾಧಾಕೃಷ್ಣ ಮತ್ತು ಸಿಬ್ಬಂದಿ ವರ್ಗದವರು ಶಾಲಾ ಮುಖ್ಯೋಪಾದ್ಯಾಯಿನಿ  ಇಂದಿರಾ ರವರಿಗೆ ಹಸ್ತಾಂತರಿಸಿದರು.
ಸಮಾರಂಭದಲಿ ್ಲಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ  ಸತೀಶ್ ಶೆಟ್ಟಿಗಾರ್, ವೇಣುಗೋಪಾಲ ಹೆಗ್ಡೆ, ಸಮೂಹ ಸಂಪನ್ಮೂಲ ವ್ಯಕ್ತಿ ಕುಶಲ ಶೆಟ್ಟಿ, ಮುಖ್ಯ ಶಿಕ್ಷಕಿ ಇಂದಿರಾ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ. ಮೋಹನ ಶೆಟ್ಟಿ ಮತ್ತು ಪೋಷಕರು, ಶಾಲಾ ಶಿಕ್ಷಕರಾದ ಗಂಗಮ್ಮ ಎಸ್. ಶೆಟ್ಟಿ, ಸುಕನ್ಯಾ, ರಮಣಿ, ಆಶಾ, ಎಚ್.ದಿನಕರ ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಗೌರವ ಶಿಕ್ಷಕಿ ಕಲ್ಪನಾ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com