ರಾಜ್ಯಮಟ್ಟದ 'ಮಳೆ ಛಾಯಾಚಿತ್ರ' ಸ್ಪರ್ಧೆ

ಉಡುಪಿ: ವಿಶ್ವ ಛಾಯಾಗ್ರಹಣ ದಿನ (ಆ.19) ಅಂಗವಾಗಿ ಉಡುಪಿ ಪ್ರೆಸ್ ಫೋಟೊಗ್ರಾಫರ್ಸ್ ಎಸೋಸಿಯೇಶನ್ ಈ ಬಾರಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿದೆ.
    ರಾಜ್ಯಾದ್ಯಂತ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಮಳೆಯನ್ನು ಬಿಂಬಿಸುವ ಚಿತ್ರ ವಿಷಯವನ್ನಾಗಿರಿಸಿದೆ.
ನಿಬಂಧನೆಗಳು: ಎಲ್ಲ ಚಿತ್ರಗಳು 12 ಇಂಚು ಉದ್ದ ಮತ್ತು 18 ಇಂಚು ಅಗಲದ ಬಹುವರ್ಣದ ಗರಿಷ್ಠ ನಾಲ್ಕು ಚಿತ್ರಗಳನ್ನು ಕಳುಹಿಸಬಹುದಾಗಿದೆ. ಚಿತ್ರಗಳ ಮೇಲೆ ಯಾವುದೇ ವಾಟರ್ ಮಾರ್ಕ್ ಇರಬಾರದು.
ಚಿತ್ರದ ಹಿಂಬದಿಯಲ್ಲಿ ಸೂಕ್ತ ಶೀರ್ಷಿಕೆ, ಹೆಸರು ಮತ್ತು ವಿಳಾಸ, ಮೊಬೈಲ್ ಹಾಗೂ ಈಮೇಲ್ ವಿಳಾಸ ಬರೆದು ಆ. 10 ರ ಒಳಗಾಗಿ: ಸಂಘದ ಅಧ್ಯಕ್ಷ ಆಸ್ಟ್ರೋ ಮೋಹನ್, ಹೇಮಾದ್ರಿ, ಎಸ್.ಎಸ್. ರೆಸಿಡೆನ್ಸಿ, ಮಲೆ ಜುಮಾದಿ ರಸ್ತೆ, ಕುಂಜಿಬೆಟ್ಟು, ಉಡುಪಿ- 576102 ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ತೀರ್ಪುಗಾರರ ನಿರ್ಧಾರವೇ ಅಂತಿಮ. 
    ಸ್ಪರ್ಧೆಯ ವಿಜೇತರಿಗೆ ಪ್ರಥಮ ರು. 3333, ದ್ವಿತೀಯ ರು. 2222 ಹಾಗೂ ತೃತೀಯ ರು. 1111 ನಗದು ಬಹುಮಾನದ ಜೊತೆಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆಗಳನ್ನು ಆ.19ರಂದು ಜರಗುವ ಸಮಾರಂಭದಲ್ಲಿ ನೀಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com