ಪುನರ್‌ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಸಿದ್ದಾಪುರ: ಯಡಮೊಗೆ ಗ್ರಾಮದ ಅಜ್ಜಿಕಾನು ಎಂಬಲ್ಲಿ ನೂತನವಾಗಿ ನವೀಕೃತಗೊಂಡ ಶ್ರೀ ರಾಜರಾಜೇಶ್ವರಿ ಶಿಲಾ ದೇಗುಲ ಸಮರ್ಪಣಾ ಪೂರ್ವಕ ಪುನರ್‌ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಹಾಗೂ ನೂತನ ಅಲಂಕಾರ ಮೂರ್ತಿ ಪ್ರತಿಷ್ಠಾ ಮಹೋತ್ಸವದ ಸಭಾ ಕಾರ್ಯಕ್ರಮ ಶುಕ್ರವಾರ ಜರುಗಿತು.
     ಶ್ರೀ ಕ್ಷೇತ್ರ ಕಮಲಶಿಲೆ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಆಡಳಿತ ಧರ್ಮದರ್ಶಿ ಎಸ್‌. ಸಚ್ಚಿದಾನಂದ ಚಾತ್ರ ಸಾಧಕರನ್ನು ಸಮ್ಮಾನಿಸಿ ಮಾತನಾಡಿ, ಧರ್ಮ, ಧಾರ್ಮಿಕತೆ ತಳಹದಿ ದೇವಾಲಯ. ದೇವಾಲಯಗಳು ಧರ್ಮ ಪ್ರಸಾರದೊಂದಿಗೆ ಸಂಕಷ್ಟದಲ್ಲಿರುವವರಿಗೆ ಶಾಂತಿ ನೀಡಬೇಕು. ದೇವಾಲಯ ಇರುವುದು ಗ್ರಾಮದ ಅಭಿವೃದ್ಧಿಗೆ. ಆದುದರಿಂದ ದೇವಾಲಯದಲ್ಲಿ ಎಲ್ಲರನ್ನು ಸಮಾನರಾಗಿ ಕಾಣಬೇಕು. ಸರಕಾರದ ನಿಲುವಿನಿಂದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅಡ್ಡಿ ಉಂಟಾಗುತ್ತಿದೆ ಎಂದರು.
    ಮುಖ್ಯ ಅತಿಥಿಯಾದ ಜಿಲ್ಲಾ ಧಾರ್ಮಿಕ ಪರಿಷತ್‌ ಅನುಷ್ಠಾನ ಸಮಿತಿ ಸದಸ್ಯ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ದೇವಾಲಯ ಊರ ಹೊಣೆಗಾರಿಕೆ ಕೇಂದ್ರ ಸ್ಥಳ. ದೇವಾಲಯಗಳಲ್ಲಿ ಗ್ರಾಮಸ್ಥರು ಸಮಸ್ಯೆ ಪರಿಹರಿಸಿಕೊಳ್ಳುತ್ತಿದರು. ದೇವಾಲಯಗಳು ಅಭಿವೃದ್ಧಿಯಾದಾಗ ಮಾತ್ರ ನಾವು ಅಭಿವೃದ್ಧಿಯಾಗಲು ಸಾಧ್ಯ ಎಂದರು.
       ಅಧ್ಯಕ್ಷತೆ ವಹಿಸಿದ ಅಜ್ಜಿಕಾನು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಸುಬ್ರಾಯ ಕನ್ನಂತ ದೇವಾಲಯದ ಅಭಿವೃದ್ಧಿಗೆ ದೇಣಿಗೆ ನೀಡಿದವರು ಹಾಗೂ ದೇವಾಲಯ ರಚಿಸಿದ ಶಿಲ್ಪಿಗಳನ್ನು ಸಮ್ಮಾನಿಸಿದರು.
      ಜ್ಯೋತಿಶ್ಯಾಸ್ತ್ರ ವಿದ್ವಾನ್‌ ಟಿ. ವಾಸುದೇವ ಜೋಯಿಸ ತಟ್ಟುವಟ್ಟು ಧಾರ್ಮಿಕ ಪ್ರವಚನ ನೀಡಿದರು. ಕರ್ಣಾಟಕ ಬ್ಯಾಂಕ್‌ ಮಂಗಳೂರು ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ಎಚ್‌.ಪಿ. ರವೀಂದ್ರನಾಥ ಹಂದೆ, ಮಾನಂಜೆ ವಿ.ಎಸ್‌.ಎಸ್‌. ಬ್ಯಾಂಕ್‌ ಅಧ್ಯಕ್ಷ ಎಸ್‌. ವಾಸುದೇವ ಯಡಿಯಾಳ, ಉದ್ಯಮಿಗಳಾದ ಬಿ. ರಾಮಕೃಷ್ಣ ಯಡಿಯಾಳ ಬರೆಗುಂಡಿ, ಬಿ. ರಾಘವೇಂದ್ರ ಹೆಮ್ಮಣ್ಣ, ಬಿ. ನಾಗು ಕುಲಾಲ, ಕೆ. ಶಂಕರಯ್ಯ ಕೊಳಾಲಮಕ್ಕಿ ಮೊದಲಾದವರು ಉಪಸ್ಥಿತರಿದರು.
        ಜು. 3ರಿಂದ 5ರ ತನಕ ನಡೆದ ಪುನರ್‌ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ಬ್ರಾಹ್ಮಿà ದುರ್ಗಾಪರಮೇಶ್ವರಿ ದೇವಳದ ವತಿಯಿಂದ ಅನ್ನಸಂತರ್ಪಣೆ ನಡೆಯಿತು.
       ಶಿವರಾಮ ಮಯ್ಯ ವಟಾರು ಸ್ವಾಗತಿಸಿದರು. ದೇವಾಲಯದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಘವೇಂದ್ರ ಕನ್ನಂತ ಪ್ರಾಸ್ತಾವಿಕ ಮಾತನಾಡಿದರು. ಕಮಲಶಿಲೆ ಶ್ರೀಧರ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಮಾನಂಜೆ ವಿ.ಎಸ್‌.ಎಸ್‌. ಬ್ಯಾಂಕ್‌ ನಿರ್ದೇಶಕ ಎಚ್‌. ಭೋಜ ಶೆಟ್ಟಿ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com