ಯಡಿಯೂರಪ್ಪ ಬಿಜೆಪಿಗೆ ಮರಳುವ ಕುರಿತಾಗಿ ಗೊಂದಲ; ಶಿಘ್ರ ನಿವಾರಣೆ: ಡಿ.ವಿ.ಎಸ್

ಕುಂದಾಪುರ: ಯಡಿಯೂರಪ್ಪ ಬಿಜೆಪಿಗೆ ಬರುತ್ತಾರೋ ಇಲ್ಲವೋ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ಈ ಗೊಂದಲ ಪಕ್ಷದಲ್ಲಿ ಇರಬಾರದು. ಯಡಿಯೂರಪ್ಪ ಬಿಜೆಪಿಗೆ ಬಂದಲ್ಲಿ ಪಕ್ಷದ ದೃಷ್ಟಿಯಲ್ಲಿ ಒಳ್ಳೆಯದಾಗುತ್ತದೆ ಎಂದು ತಾನು ಹೇಳಿದ್ದೇ ಹೊರತು ಯಡಿಯೂರಪ್ಪ ಪರ ತಾನು ಬ್ಯಾಟ್‌ ಮಾಡುತ್ತಿದ್ದೇನೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಡಿ.ವಿ. ಸದಾನಂದ ಗೌಡ ಹೇಳಿದರು.
      ಅವರು ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಗೊಂದಲಗಳು ಇದ್ದಾಗ ಅದು ಪಕ್ಷ ಸಂಘಟನೆಗೆ ತೊಂದರೆಯಾಗುತ್ತದೆ. ಕಾರ್ಯಕರ್ತರು ಹಾಗೂ ಮತದಾರರಿಗೆ ಆತಂಕದ ಸ್ಥಿತಿ ಎದುರಾಗುತ್ತದೆ. ಅದೇ ರೀತಿ ಕಳೆದ ಚುನಾವಣೆ ಪೂರ್ವದ ಹತ್ತು ತಿಂಗಳಲ್ಲಿ ಯಡಿಯೂರಪ್ಪ ಹಾಗೂ ಬೆಂಬಲಿಗರು ಬಿಜೆಪಿಗೆ ಬರ್ತಾರೋ ಇಲ್ಲವೋ ಎನ್ನುವ ಗೊಂದಲ ಸೃಷ್ಟಿಯಾಗಿತ್ತು. ಇದೇ ಚರ್ಚೆ ಕಾರ್ಯಕರ್ತರಲ್ಲಿ, ಮತದಾರರಲ್ಲಿ ಗೊಂದಲದ ವಾತಾವರಣ ಉಂಟುಮಾಡಿ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಕಾಣಬೇಕಾಯಿತು. ಅದೇ ರೀತಿ ಈಗಲೂ ಗೊಂದಲಗಳು ಸೃಷ್ಟಿಯಾಗದಂತೆ ಎಚ್ಚರ ವಹಿಸಬೇಕಾಗುತ್ತದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com