ಪತ್ರಿಕೋದ್ಯಮದ ಅನುಭವ ರೋಚಕ: ಎಂ.ವಿ.ಕಾಮತ್

ಉಡುಪಿ: ಈಗ ಬದುಕಿರುವವರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ವರದಿ ಮಾಡಿದವರಲ್ಲಿ ಉಳಿದಿರುವುದು ನಾನೊಬ್ಬನೇ. ಅದು ಮುಖ್ಯವಲ್ಲ. ಅಂದಿನ ಆ ರೋಚಕ ಅನುಭವ ಅವಿಸ್ಮರಣೀಯ. ಪತ್ರಿಕೋದ್ಯಮ ಅಂತಹ ಅಪೂರ್ವ ಕ್ಷಣಗಳನ್ನು ನನಗೆ ಒದಗಿಸಿದೆ ಎಂದು ಎಂ.ಐ.ಸಿಯ ಗೌರವ ನಿರ್ದೇಶಕ, ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಹೇಳಿದರು.
       ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ  ಮಣಿಪಾಲದ ಅವರ ನಿವಾಸದಲ್ಲಿ ಆಯೋಜಿಸಿದ  ಪತ್ರಿಕಾ ದಿನಾಚರಣೆ ಗೌರವ ಸ್ವೀಕರಿಸಿ ಮಾತನಾಡುತ್ತಾ, ಸ್ವಾತಂತ್ರ್ಯ ಸಿಕ್ಕ ಆ ಮಧ್ಯರಾತ್ರಿಯಲ್ಲಿ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಹೆಚ್ಚುತ್ತಿದ್ದ ಎದೆಬಡಿತ , ಯೂನಿಯನ್ ಧ್ವಜ ಇಳಿಸಿ ಭಾರತದ ಧ್ವಜ ಹಾರಿಸಿದ ಆ ಕ್ಷಣದ  ವರದಿಯ ಉತ್ಖಟತೆ ಈಗಲೂ ಮೈನವಿರೇಳಿಸವಂತೆ ಮಾಡುತ್ತದೆ. ನೆಹರೂ, ಇಂದಿರಾಗಾಂಧಿ ಸಹಿತ ಅನೇಕ ಪ್ರಧಾನಿ, ರಾಷ್ಟ್ರಪತಿಗಳ ಜೊತೆಗಿನ ಅನುಭವಗಳನ್ನು ಹಂಚಿಕೊಂಡರು.
      ಗೌರವ ಸಮರ್ಪಿಸಿದ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ , ಎಂ.ವಿ ಕಾಮತ್ ಸರಳತೆಗೆ ಈ ಪತ್ರಿಕೋದ್ಯಮ ದಿನಾಚರಣೆ ಸರಳತೆಯ ಸಂಖೇತವಾಗಿ ಗಮನ ಸೆಳೆದಿದೆ. ಶಾಸಕನಾಗಿ ಎರಡು ತಿಂಗಳ ಅವಧೀಯಲ್ಲಿ ಈ ಸನ್ಮಾನ ಕಾರ್ಯಕ್ರಮದ ಕರೆ ನನ್ನ ಹರ್ಷದ ಹಾಗೂ ಭಾಗ್ಯದ ಕರೆ ಎಂದರು. 
      ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಶೇಖರ ಅಜೆಕಾರು ಮಾತನಾಡಿ, ಗ್ರಾಮೀಣ ಪತ್ರಕರ್ತರ ಸಮಸ್ಯೆ ನಿವಾರಣೆಗೆ ಪತ್ರಿಕಾ ಸಮೂಹಗಳು ಮತ್ತು ಸರಕಾರ ಗಮನಹರಿಸಬೇಕು ಎಂದರು.
ಹಿರಿಯರೆಡೆಗೆ ನಮ್ಮ ನಡಿಗೆ ಧ್ಯೇಯದೊಂದಿಗೆ ಪತ್ರಿಕಾದಿನಾಚರಣೆಯನ್ನು ಆಚರಿಸುತ್ತಿರುವ ವೇದಿಕೆ ಈ ಹಿಂದೆ ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ. ಚಂದ್ರಯ್ಯ, ಉಮೇಶ್‍ರಾವ್ ಎಕ್ಕಾರು, ಕು.ಗೋ, ಎ.ಎಸ್.ಎನ್. ಹೆಬ್ಬಾರ್ ಅವರಿಗೆ ಗೌರವ ಸಮರ್ಪಿಸಲಾಗಿತ್ತು. 
      ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಬೋರ್ಗಲ್‍ಗುಡ್ಡೆ ವೇದಿಕೆಯ  “ಹಿರಿಯರೆಡೆಗೆ ನಮ್ಮ ನಡಿಗೆ” ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಸುಕುಮಾರ್ ಮುನಿಯಾಲ್ ವಂದಿಸಿದರು. ಪೇತ್ರಿ ಭಾಸ್ಕರ್‍ರಾವ್, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com